Monday, 18 February 2013

ಪಂಪನ ಆದಿಪುರಾಣದಿಂದ ಭರತೇಶನ ಶಿಲಾಶಾಸನ ಪ್‌ರಕರಣ (v1)

ಹೊಸ ನೀರು ಬಂದು ಹಳೇ ನೀರನ್‌ನು ಕೊಚ್‌ಚಿಕೊಂಡು ಹೋಯಿತು

    ಯಾವುದೇ ಒಂದು ಕಚೇರಿಯಲ್‌ಲಿ ಒಬ್‌ಬ ಅಧಿಕಾರಿ ವರ್‌ಗವಾಗಿ ಬೇರೊಬ್‌ಬರು ಬಂದಾಗ ಅಥವಾ ಚುನಾವಣೆಯ ನಂತರ ಮಂತ್‌ರಿಮಂಡಲ ಬದಲಾದಾಗ, ನಿರ್‌ಗಮಿಸಿದ ಅಧಿಕಾರಿಯ ಅಥವಾ ಮಂತ್‌ರಿಯ ನಾಮಫಲಕ ತೆಗೆದುಹಾಕಿ ಆ ಜಾಗದಲ್‌ಲಿ ಆಗಮಿಸಿದ ಅಧಿಕಾರಿಯ ಅಥವಾ ಮಂತ್‌ರಿಯ ನಾಮಫಲಕ ಹಾಕುವುದನ್‌ನು ತೋರಿಸುವುದನ್‌ನು ಟೀವಿಗಳಲ್‌ಲಿ ನಾವು ನೋಡುತ್‌ತೇವೆ. ಈ ವಿಷಯ ಕುರಿತಂತೆ ನನಗೆ ನೆನಪಿಗೆ ಬರುವುದು ಮಹಾಕವಿ ಪಂಪನ ಆದಿಪುರಾಣದಲ್‌ಲಿನ ಈ ಪ್‌ರಕರಣ.

    ಭರತೇಶನು ಷಟ್‌ಖಂಡ ಭೂಮಂಡಲವನ್‌ನು ಗೆದ್‌ದು ದಿಗ್‌ವಿಜಯವನ್‌ನು ಮುಗಿಸಿಕೊಂಡು ತನ್‌ನ ಪರಾಕ್‌ರಮ, ಗೆಲುವಿನ ಗರ್‌ವದಿಂದ ಬೀಗುತ್‌ತಾ ವೃಷಭಾಚಲದತ್‌ತ ಬಂದ. ಅಲ್‌ಲಿನ ಶಿಲೆಗಳ ಮೇಲೆ ತನ್‌ನ ದಿಗ್‌ವಿಜಯದ ಗಾಥೆಗಳನ್‌ನು ಕೆತ್‌ತಿಸಿ ಶಾಸನ ಬರೆಸಲು ಉತ್‌ಸುಕನಾಗಿದ್‌ದ. ಅಲ್‌ಲಿಗೆ ಹೋಗಿ ನೋಡಿದಾಗ ಅಲ್‌ಲಿನ ಕಲ್‌ಲುಗಳ ಮೇಲೆಲ್‌ಲಾ ಯುಗಯುಗಗಳಿಂದ ವಿಖ್‌ಯಾತರಾದ  ಚಕ್‌ರಿಸಮೂಹದವರ  ಶೌರ್‌ಯ, ಪ್‌ರತಾಪ, ತ್‌ಯಾಗ, ವಿಜಯಗಳನ್‌ನು ಕುರಿತ ಕಲ್‌ಬರಹಗಳೇ ತುಂಬಿ ಹೋಗಿದ್‌ದವು. ಅವುಗಳನ್‌ನು ನೋಡುತ್‌ತಾ ನೋಡುತ್‌ತಾ ಅವನ ಗರ್‌ವವು ಇಳಿಯಿತು. ನಾಚಿಕೆ ಉಂಟಾಯಿತು.

    ಆದರೂ ಅವನಿಗೆ ತನ್‌ನ ದಿಗ್‌ವಿಜಯವನ್‌ನು ಕುರಿತು ಶಾಸನಗಳನ್‌ನು ಬರೆಸುವ ಇಚ್‌ಚೆ ಉಡುಗಲಿಲ್‌ಲ! ಹಳೆಯ ಶಾಸನಗಳನ್‌ನು ಒಂದೊಂದಾಗಿ ಅಳಿಸಿ ಹಾಕಿ ಬರೆಯಲು ಅನುವು ಮಾಡಿಕೊಟ್‌ಟು ತನ್‌ನ ದಿಗ್‌ವಿಜಯವನ್‌ನು ಕುರಿತ ಪ್‌ರಶಸ್‌ತಿಗಳನ್‌ನು ಕೆತ್‌ತಿಸಿದ.

    ಭರತೇಶನಿಗೆ ನಾಚಿಗೆಯಾದರೂ, ಗರ್‌ವಭಂಗವಾದರೂ ಸಹ ಕೀರ್‌ತಿ, ಯಶಸ್‌ಸು, ಅಧಿಕಾರ ಇವುಗಳ ಮತ್‌ತಿನಿಂದಾಗಿ ಪ್‌ರಶಸ್‌ತಿಗಳನ್‌ನು (ಹೊಗಳಿಕೆಯನೊ·ಳಗೊಂಡ ಶಾಸನಗಳನ್‌ನು) ಕಲ್‌ಲಿನ ಮೇಲೆ ಬರೆಸುವ ಬಯಕೆ ಮಾತ್‌ರ ಉಡುಗಲಿಲ್‌ಲ.

ಮಹಾಕವಿ ಪಂಪನ ಆದಿಪುರಾಣದ ೧೩ನೇ ಆಶ್‌ವಾಸದಲ್‌ಲಿನ ಈ ತುಣುಕನ್‌ನು ನೋಡೋಣ:
   
    ವ|| ಆ ವೃಷಭಾದ್‌ರಿಯ ಮೇಖಳಾಭಿತ್‌ತಿಯೊಳ್‌ ಆತ್‌ಮೀಯವಿಶ್‌ವವಿಶ್‌ವಂಭರಾವಿಜಯಪ್‌ರಶಸ್‌ತಿಯನೞ್‌ತಿಯೊಳ್‌ ಬರೆಯಿಸುವನೆಂದು ಪೋಗಿ ನೋಡಿವನ್‌ನೆಗ್‌ಗಂ.

ಆ ವೃಷಭಾದ್‌ರಿಯ ಮೇಖಳಾಭಿತ್‌ತಿಯೊಳ್‌ =  ಆ ವೃಷಭಾದ್‌ರಿ ಬೆಟ್‌ಟದ ಕಲ್‌ಲಿನ ಮೇಲೆ, ಆತ್‌ಮೀಯ = ತನ್‌ನ, ವಿಶ್‌ವವಿಶ್‌ವಂಭರಾವಿಜಯಪ್‌ರಶಸ್‌ತಿಯಂ = ವಿಶವನ್‌ನೆಲ್‌ಲಾ ಗೆದ್‌ದ ದಿಗ್‌ವಿಜಯದ ಹೊಗಳಿಕೆಯನ್‌ನೊಳಗೊಂಡ ಶಾಸನವನ್‌ನು, ಬರೆಯಿಸುವನೆಂದು = ಬರೆಯಿಸುವೆ ಎಂದು,  ಅೞ್‌ತಿಯೊಳ್‌ = ಸಂತೋಷದಿಂದ, ಪೋಗಿ ನೋಡಿವನ್‌ನೆಗಂ = ಹೋಗಿ ನೋಡಿದಾಗ

ಅದಱೊಳನೇಕಕಲ್‌ಪಶತಕೋಟಿಗಳೊಳ್‌ ಸಲೆ ಸಂದ ಚಕ್‌ರಿವೃಂ
ದದ ಚಲದಾಯದಾಯತಿಯ   ಬೀರದ ಚಾಗದ ಮಾತುಗಳ್‌ ಪೊದ
ೞ್‌ಪೊದವಿರೆ ತತ್‌ಪ್‌ರಶಸ್‌ತಿಗಳೊಳಂತವನೊಯ್‌ಯನೆ ನೋಡಿ ನೋಡಿ ಸೋ
ರ್‌ದುದು ಕೊಳಗೊಂಡ ಗರ್‌ವರಸಮಾ ಭರತೇಶಚಕ್‌ರವರ್‌ತಿಯಾ                      (೧೩.೭೧)                                      

ಅದಱೊಳ್‌ = ಆ ಕಲ್‌ಲುಗಳ ಮೇಲೆಲ್‌ಲಾ,  ಅನೇಕಕಲ್‌ಪಶತಕೋಟಿಗಳೊಳ್‌ = ಯುಗಯುಗಗಳಿಂದ,  (ಸಲೆ) ಸಂದ ಚಕ್‌ರಿವೃಂದದ = ಚಕ್‌ರಿ ಸಮುದಾಯದಲ್‌ಲಿದ್‌ದವರ, ಚಲದ ಆಯದ ಆಯತಿಯ   ಬೀರದ ಚಾಗದ ಮಾತುಗಳ್‌  = ಛಲ, ಯುಧ·ಕೌಶಲ್‌ಯ , ಶೌರ್‌ಯ, ತ್‌ಯಾಗ ಇವುಗಳನ್‌ನು ಕುರಿತ ಮಾತುಗಳೇ, ಪೊದೞ್‌ಪೊದವಿರೆ = ತುಂಬಿ ಹೋಗಿದ್‌ದವು. ತತ್‌ಪ್‌ರಶಸ್‌ತಿಗಳೊಳಂತವನೊಯ್‌ಯನೆ  = ಅಂತಹ ಹೊಗಳಿಕೆಗಳನ್‌ನೊಳಗೊಂಡ ಶಾಸನಗಳನ್‌ನು,  ನೋಡಿ ನೋಡಿ = ನೋಡುತ್‌ತಾ ನೋಡುತ್‌ತಾ, ಆ ಭರತೇಶಚಕ್‌ರವರ್‌ತಿಯಾ ಕೊಳಗೊಂಡ ಗರ್‌ವರಸಂ = ಭರತೇಶ ಚಕ್‌ರವರ್‌ತಿಯಲ್‌ಲಿದ್‌ದ ಗರ್‌ವವು,  ಸೋರ್‌ದುದು = ಇಳಿದುಹೋಯಿತು.

    ವ|| ಅಂತು ಗಳಿತ ಗರ್‌ವನಾಗಿ ಸಿಗ್‌ಗಾಗಿ ಪೂರ್‌ವಾವನಿಪಾಳಪ್‌ರಶಸ್‌ತಿಯೊಳೊಂದಂದಂ ದಂಡರತ್‌ನದಿಂ ಸೀಟಿ ಕಳೆದು ನಿಜಪ್‌ರಶಸ್‌ತಿಗೆಡೆಮಾಡಿ.

ಅಂತು = ಹೀಗೆ, ಗಳಿತ ಗರ್‌ವನಾಗಿ = ಗರ್‌ವವು ಅಳಿದವನಾಗಿ,  ಸಿಗ್‌ಗಾಗಿ = ನಾಚಿದವನಾಗಿ, ಪೂರ್‌ವಾವನಿಪಾಳ = ಹಿಂದಿನ ಆಳರಸರ, ಪ್‌ರಶಸ್‌ತಿಯೊಳ್‌ = ಹೊಗಳಿಕೆಯ ಶಿಲಾಶಾಸನಗಳನ್‌ನು,  ಒಂದಂದಂ = ಒಂದೊಂದಾಗಿ, ದಂಡರತ್‌ನದಿಂ = ದಂಡರತ್‌ನದಿಂದ, ಸೀಟಿ ಕಳೆದು = ಅಳಿಸಿಹಾಕಿ,  (ನಿಜ) ಪ್‌ರಶಸ್‌ತಿಗೆ = ತನ್‌ನ ಹೊಗಳಿಕೆಗಳನ್‌ನೊಳಗೊಂಡ ಶಾಸನಗಳಿಗೆ, ಎಡೆಮಾಡಿ = ಜಾಗ ಮಾಡಿಕೊಟ್‌ಟನು.

No comments:

Post a Comment