ಕನ್ನಡದಲ್ಲಿ ಸಂಯುಕ್ತಾಕ್ಷರಗಳನ್ನು ಬರೆಯುವ ಕುರಿತ ಒಂದು ಸಂಭಾಷಣೆ:
"ಶೋ"
"ಇದೇನು? ಓದಿ."
"ಶೋ"
"ಸರೀನಾ?"
"ಊಂ. ಸರಿ."
"ಇದು ಯಾವಾಗಲೂ ಶೋ "
"ಹೌದು. ಇದು ಯಾವಾಗಲೂ ಶೋ ನೇ. ಏನ್ರೀ ಇದು, ಸ್ಕೂಲ್ ಮಕ್ಕಳಿಗೆ ಕೇಳೋ ಹಾಗೆ ಕೇಳ್ತೀರಲ್ಲಾ?!"
"ಸ್ವಲ್ಪ ಇರಿ"
"ಶ್ಲೋ"
"ಈಗ ಓದಿ. ಇದು ಶೋನೇನಾ?"
"ಈಗ ಇದು ಶ್ಲೋ."
"ಆ ಹೌದು. ನೋಡೊದಕ್ಕೆ ಶೋ ಹಾಗೇ ಇದ್ದರೂ, ಕೆಳಗೆ ಲವತ್ತು ಕೊಟ್ಟ ತಕ್ಷಣ, ಅದು ಶ್ ಅಂತ ಉಚ್ಚರಿಸಬೇಕು. ಅಲ್ವಾ?"
"ಹೌದು. ಅದು ಹಾಗೇನೇ."
"ಇದನ್ನ ಓದಿ."
"ಶ್ರೋ"
"ಇದು ಶ್ರೋ"
"ಆ ಹೌದು. ನೋಡೊದಕ್ಕೆ ಶೋ ಹಾಗೇ ಇದ್ದರೂ, ಕೆಳಗೆ ರವತ್ತು ಕೊಟ್ಟ ತಕ್ಷಣ, ಅದು ಶ್ ಅಂತ ಉಚ್ಚರಿಸಬೇಕು. ಅಲ್ವಾ?"
"ಹೌದು."
"ಅಂದರೆ ಶ, ಶಾ, ಶಿ, ಶೀ, ಶು, ಶೂ, ಶೆ, ಶೇ, ಶೈ, ಶೊ, ಶೋ, ಶೌ, ಶಂ ಇವೆಲ್ಲಾನೂ ಸಂಯುಕ್ತಾಕ್ಷರಗಳಲ್ಲಿ ಬಂದಾಗ, ಶ್ ಅಂತಾನೇ ಉಚ್ಚರಿಸಬೇಕು. ಅಲ್ವಾ? ಶ್ಚ, ಶ್ಯಾ, ಶ್ರಿ, ಶ್ಲೀ, ಮುಂತಾಗಿ ಶ್ರಾಂ ವರೆಗೆ ಇವೆಲ್ಲದರಲ್ಲೂ ಶ್ ಅಂತಾನೇ ಉಚ್ಚರಿಸಬೇಕು. ಶ ನಿಂದ ಶಂ ವರೆಗಿನ ಎಲ್ಲಾ ಸ್ವರಗಳು ಸೇರಿದ ಶ್ ಅಕ್ಷರಗಳ ಚಾಕ್ಷುಷರೂಪ ಗುಣಿತಾಕ್ಷರಗಳಂತೆ ಕಂಡರೂ, ಅವುಗಳನ್ನು ಉಚ್ಚರಿಸುವಾಗ ಆ ಅಕ್ಷರಗಳು ಗುಣೀತಾಕ್ಷರಗಳೇ, ಸಂಯುಕ್ತಾಕ್ಷರಗಳೇ ಎಂಬುದನ್ನು ಮೊದಲು ನೋಡಿ ಆ ಬಳಿಕ ಉಚ್ಚಾರವನ್ನು ನಿರ್ಧರಿಸಬೇಕು. ಈ ದ್ವಂದವೇ ಸಂದಿಗ್ಧಕಾರಕ. ಹೌದಾ?"
"ಇಲ್ಲ. ಇದರಲ್ಲೇನು ಸಂದಿಗ್ಧ?"
"ಹೇಳ್ತೇನೆ."
"ಶ್ಲೋ, ಈಗ ಮತ್ತೆ ಹೇಳಿ ಇದೇನು?"
"ಇದು ಶ್ಲೋ."
“ಇದರಲ್ಲಿ ಓತ್ವ ಧೀರ್ಘ ಯಾವುದರದು ಶ ದ್ದೋ, ಲ ದ್ದೋ?”
“ಅದು ಲ ಗೇ ಸೇರಿದ್ದು. ಅದಕ್ಕೇ ಅದನ್ನ ಲ ಕ್ಕೇ ಸೇರಿಸಿ ಹೇಳೋದು.”
"ಹಾಗಾದರೆ ಓತ್ವ ಧೀರ್ಘನ ಲ ಗೆ ಏಕೆ ಕೊಟ್ಟಿಲ್ಲ."
" " (ಮೌನ)
"ಏಕೆ ಸುಮ್ಮನಾದಿರಿ? ಶ್ಲೋ ನಲ್ಲಿ ಶ ಕ್ಕೆ ಓತ್ವ ಧೀರ್ಘ ಕೊಟ್ಟು, ಲ ಕ್ಕೆ ಓತ್ವ ದೀರ್ಘ ಸೇರಿಸಿ ಹೇಳೋದು ಸರೀನಾ?"
" " (ಮೌನ)
"ಏನು ಹೇಳೋಕೆ ಗೊತ್ತಾಗ್ತಿಲ್ವಾ? ಹಾಗೇನೇ ಶ್ರೋ ನಲ್ಲಿ ಶ ಕ್ಕೆ ಓತ್ವ ಧೀರ್ಘ ಕೊಟ್ಟು, ರ ಕ್ಕೆ ಓತ್ವ ದೀರ್ಘ ಸೇರಿಸಿ ಹೇಳೋದು ಸರೀನಾ? ಇದನ್ನೇ ನಾನು ದ್ವಂದ್ವ ಮತ್ತು ಸಂದಿಗ್ಧ ಎಂದದ್ದು"
"ಇರಬಹುದು. ಆದರೂ ಈಗಿರುವ ಪದ್ಧತಿಗೆ ಜನ ಒಗ್ಗಿ ಹೋಗಿದ್ದಾರೆ. ಅಲ್ಲವೇ?"
"ಸರಿಯಿಲ್ಲ ಅನ್ನಿಸಿದ್ದನ್ನು ಸರಿಪಡಿಸಿಕೊಳ್ಳಬೇಕಲ್ಲವೇ? ಈಗ ಇದನ್ನು ಓದಿ:
ಪರಿಶ್‌ರಮ, ಆಶ್‌ಚರ್‌ಯ, ಶ್‌ಲಾಘನೆ, ಪ್‌ರಶ್‌ನಿಸು, ಶ್‌ರೇಯಸ್ಸು, ಶ್‌ಲೋಕ, ವಿಶ್‌ಲೇಷಣೆ, ಪ್‌ರಶ್‌ನೋತ್ತರ"
"ಓದೋದಕ್ಕೆ ಸ್ವಲ್ಪ ಕಷ್ಟ ಆಗ್ತಿದೆ."
"ಹೌದು. ನಿಮಗೆ ಇದು ಹೊಸದರಂತಿದೆ. ಅದಕ್ಕೆ ಹಾಗೆ. ಸ್ವಲ್ಪ ರೂಡಿಯಾದರೆ ಸುಲಭವಾಗುತ್ತದೆ. ಒಂದಷ್ಟು ಬಾರಿ ಪ್ರಯತ್ನಿಸಿ. ಆನಂತರ ನೋಡೋಣ. ಓಕೆ?"
"ಆಗಲಿ."
------------------------------------------------------------------------------------------------------
ಆನಂತರ ಮತ್ತೆ ಭೇಟಿಯಾದಾಗ -
"ನಮಸ್ಕಾರ"
"ನಮಸ್ಕಾರ. ನೀವು ಒತ್ತಕ್ಷರಗಳ ಬಗ್ಗೆ ಹೋದ ಸಾರಿ ಹೇಳಿದ್ದು ಯೋಚಿಸಿದೆ. ಸ್ವಲ್ಪ ಅಭ್ಯಾಸ ಆದ ಮೇಲೆ ಸುಲಭವಾಗಿ ಓದಬಹುದು ಎಂದು ನೀವಂದಿದ್ದು ನಿಜ ಅನ್ನಿಸಿತು."
"ನಿಮಗೆ ಗೊತ್ತಾ ಕೇವಲ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಒತ್ತಕ್ಷರಗಳನ್ನು ಕೆಳಗೆ ಬರೆಯುವುದು ಮತ್ತ್ ಮೊದಲನೇ ವ್ಯಂಜನಕ್ಕೆ ಸ್ವರವನ್ನು ಸೇರಿಸುವುದು. ಬಹುತೇಕ ಭಾರತೀಯ ಭಾಷೆಗಳಲ್ಲಿ ಉಚ್ಚಾರಣೆಗೆ ಅನುಸಾರವಾಗಿಯೇ ಬರೆಯುತ್ತಾರೆ."
"ಹೌದಾ?"
"ಹೌದು. ಈಗ ನೋಡಿ ಕೆಲವು ಪದಗಳನ್ನ ಕನ್ನಡ ಮತ್ತು ಸಂಸ್ಕೃತದಲ್ಲಿ ಬರೆದಿರೋ ಈ ಹಾಳೆ ನೋಡಿ:
ಈರ್ಷ್ಯಾ ईर्ष्या
ಕ್ಲೇಶ क्लेश
ಧ್ಯಾನ ध्यान
ನಿತ್ಯ नित्य
ನಿಷ್ಠಾ निष्ठा
ಪರಹಸ್ತೇ परहस्ते
ವಸ್ತು वस्तु
ವಿಶ್ವಾಮಿತ್ರ विश्वामित्र
ವಿಶ್ವಾಸ विश्वास
ವಿಷ್ಣು विष्णु
ವ್ಯಾಪಾರೀ व्यापारी
ಶಬ್ದ शब्द
ಶ್ವೇತ श्वेत
ಈ ಪದಗಳನ್ನು ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಬರೆದಿದೆ. ಸಂಸ್ಕೃತದಲ್ಲಿ ಸಂಯುಕ್ತಾಕ್ಷರಗಳನ್ನು ಬರೆದಿರುವುದು ಉಚ್ಚಾರಣೆಗೆ ಅನುಸಾರವಾಗಿದೆ; ಆದರೆ ಕನ್ನಡದಲ್ಲಿ ಹಾಗಿಲ್ಲ. ಹೌದೇ? ಯೋಚಿಸಿ."
"ನೀವು ಯಾವಾಗಲೂ ತಲೆ ಬಿಸಿಮಾಡೋ ಹಾಗಿರೋ ವಿಷಯನೇ ಹೇಳ್ತೀರಿ."
"ಓದಿ. ಏನನ್ನಿಸುತ್ತೆ ಹೇಳಿ."
"ಉಂ... ಓದಿದೆ. ನೀವು ಹೇಳುವುದು ನಿಜ. ಸಂಸ್ಕೃತದಲ್ಲಿ ನಾವು ಉಚ್ಚಾರ ಮಾಡೋ ಹಾಗೇ ಬರೆದಿದೆ. ಕನ್ನಡದಲ್ಲಿ ಹಾಗಿಲ್ಲ."
"ಸಂಸ್ಕೃತದಲ್ಲಿ ಮಾತ್ರ ಅಲ್ಲ, ಬಾರತದ ಬೇರೆ ಬಹಳ ಭಾಷೆಗಳಲ್ಲಿ ಸಂಸ್ಕೃತದ ಹಾಗೇ ಬರೆಯೋದು. ಕೇವಲ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಒತ್ತಕ್ಷರಗಳನ್ನ ಕೆಳಗೆ ಬರೆಯೋದು; ಉಚ್ಚಾರಣೆ ಕ್ರಮ ಅನುಸರಿಸದೇ ಇರುವುದು."
"ಹೌದೇ?"
"ಹೌದು. ಅದಕ್ಕೇ ನಾನು ಹೇಳೋದು ಒತ್ತಕ್ಷರ ಬರೆಯೋದು ಬೇಡ. ಯೋಚಿಸಿ."
"ಉಂ........"
"ಮತ್ತೆ ಸಿಕ್ಕೋಣ"
"ಮತ್ತೆ .... ಪ್ರಶ್ನೆ ಸಮೇತ ಬರ್ತೀರಾ?"
ನಗು.
"ಬೈ"
---------------------------------------------------------------------------------------------------------------------
ಮೇಲಿನ ಸಂಭಾಷಣೆಗಳನ್ನು ಓದಿದ ನಂತರ ಈ ಕೆಳಗೆ ಸಂಯುಕ್ತಾಕ್ಷರಗಳನ್ನು ಕುರಿತು ಕೊಟ್ಟಿರುವ ವಿವರಣೆ ಸ್ಪಷ್ಟವಾಗುತ್ತದೆ:
ಸಂಯುಕ್ತಾಕ್ಷರಗಳು:
ಕನ್ನಡ ಲಿಪಿಯು ಧ್ವನ್ಯಾತ್ಮಕ ಲಿಪಿಯ ಮೂಲಸೂತ್ರಗಳಿಗೆ ಬಹಳ ಹೊಂದುತ್ತದೆ; ಪ್ರಸ್ತುತ ಸಂಯುಕ್ತಾಕ್ಷರಗಳನ್ನು ಬರೆಯುವ ರೀತಿಯನ್ನು ಹೊರತುಪಡಿಸಿ. ಸಂಯುಕ್ತಾಕ್ಷರದ ಸ್ವರವನ್ನು ಜೋಡಿಸಿದ ಮೊದಲ ವ್ಯಂಜನದ ಚಾಕ್ಷುಷರೂಪ ಗುಣಿತಾಕ್ಷರದಂತೆ ಕಂಡರೂ, ಅದನ್ನು ಉಚ್ಚರಿಸುವಾಗ ಅದು ಗುಣಿತಾಕ್ಷರವೇ ಅಥವಾ ಸಂಯುಕ್ತಾಕ್ಷರದ ಭಾಗವೇ ಎಂಬುದನ್ನು ಮೊದಲು ನೋಡಿ ಆ ಬಳಿಕ ಉಚ್ಚಾರವನ್ನು ನಿರ್ಧರಿಸಬೇಕು. ಗುಣಿತಾಕ್ಷರವಾದಾಗ ಚಾಕ್ಷುಷರೂಪದಲ್ಲಿರುವಂತೆ ಉಚ್ಚರಿಸಬೇಕು; ಸಂಯುಕ್ತಾಕ್ಷರದ ಮೊದಲ ವ್ಯಂಜನವಾದಾಗ, ಸ್ವರರಹಿತ ಮೂಲವ್ಯಂಜನದಂತೆ ಉಚ್ಚರಿಸಿ ಈ ವ್ಯಂಜನಕ್ಕೆ ಲಗತ್ತಿಸಿರುವ ಸ್ವರವನ್ನು ಸಂಯುಕ್ತಾಕ್ಷರದ ಕೊನೆಯ ವ್ಯಂಜನದ ಜೊತೆ ಬೆರೆಸಲು ಉಳಿಸಿಕೊಳ್ಳಬೇಕು. ಇಂತಹ ಸಾಂದರ್ಭಿಕ ನಿರ್ಣಯ ಅನಪೇಕ್ಷಣೀಯ. ಸಂಯುಕ್ತಾಕ್ಷರಗಳನ್ನು ಬರೆಯುವ ರೀತಿ ಉಚ್ಚಾರಣೆಯ ಅನುಕ್ರಮದಲ್ಲಿ ಇಲ್ಲ. ಸಂಯುಕ್ತಾಕ್ಷರದ ಕೊನೆಯ ವ್ಯಂಜನಕ್ಕೆ ಸೇರಿದ ಸ್ವರವನ್ನು ಸಂಯುಕ್ತಾಕ್ಷರದ ಮೊದಲನೇ ವ್ಯಂಜನಕ್ಕೆ ಲಗತ್ತಿಸುತ್ತೇವೆ. ಇದೊಂದು ವ್ಯತಿಕ್ರಮ. ಇದು ಧ್ವನ್ಯಾತ್ಮಕ ಲಿಪಿಯ ಮೂಲಸೂತ್ರಕ್ಕೆ ಅನುಗುಣವಾಗಿಲ್ಲ. ಈ ದ್ವಂದವೇ ಸಂದಿಗ್ಧಕಾರಕ. ಮನಸ್ಸಿಗೂ ತ್ರಾಸಕರ. ಇಂತಹ ವ್ಯತಿಕ್ರಮಗಳು ಕನ್ನಡ ಲಿಪಿಯನ್ನು ಕಲಿಯುವುದನ್ನು ಕಷ್ಟಕರವನ್ನಾಗಿ ಮಾಡಿವೆ. ಈ ಕುರಿತು ಅವಶ್ಯವಾದ ಗಮನವೇ ಹರಿದಿಲ್ಲ. ಭಾಷಾಮನಶಾಸ್ತ್ರದ ದೃಷ್ಟಿಕೋನದಿಂದ ಇದರ ಅಧ್ಯಯನವಾಗಬೇಕು. ಈ ಬಗ್ಗೆ ಭಾಷಾಮನೋವಿಜ್ಞಾನಿಗಳು ಬೆಳಕು ಚೆಲ್ಲಬೇಕಾಗಿದೆ. ಸಂಯುಕ್ತಾಕ್ಷರಗಳನ್ನು ಸಂಪೂರ್ಣವಾಗಿ ಕೈಬಿಟ್ಟರೆ, ಆಗ ವರ್ಣಗಳ ಮತ್ತು ಗುಣಿತಾಕ್ಷರಗಳ ಶ್ರಾವಣರೂಪಗಳಿಗೂ ಚಾಕ್ಷುಷರೂಪಗಳಿಗೂ ಇರಬೇಕಾದ ಸಂಬಂಧಗಳು ಸಾಂದರ್ಭಿಕವಾಗಿ ಬದಲಾಗದೇ ಯಾವಾಗಲೂ ಒಂದೇ ತೆರನಾಗಿ ಗಟ್ಟಿಯಾದ ಬೆಸುಗೆಯಂತಿರುತ್ತವೆ; ಮನಸ್ಸಿಗೆ ಸುಲಭವಾಗಿ ನಾಟುತ್ತವೆ. ಯಾವ ದ್ವಂದ್ವವಾಗಲೀ, ಸಂದಿಗ್ಧವಾಗಲೀ ಇರುವುದಿಲ್ಲ. ಉಚ್ಚಾರಣೆಗೆ ಸಾಂದರ್ಭಿಕ ನಿರ್ಣಯಗಳ ಅವಶ್ಯಕತೆಯಂತೂ ಇರುವುದೇ ಇಲ್ಲ. ಬರೆಯುವ ರೀತಿಯೂ ಸಹ ಉಚ್ಚಾರಣೆಯ ಅನುಕ್ರಮದಲ್ಲೇ ಇರುತ್ತದೆ. ಆಗ ಕನ್ನಡ ಲಿಪಿ ಸಂಪೂರ್ಣವಾಗಿ ಧ್ವನ್ಯಾತ್ಮಕ ಲಿಪಿಯಾಗುತ್ತದೆ. ಅಂತಹ ಲಿಪಿಯನ್ನು ಕಲಿಯುವುದು ಸುಲಭವಾಗುತ್ತದೆ. ಅಂತಹ ಲಿಪಿಯಲ್ಲಿ ಬರೆಯುವುದು ಸುಲಭವಾಗುತ್ತದೆ. ಅಂತಹ ಲಿಪಿಯಲ್ಲಿ ಬರೆದಿದ್ದನ್ನು ಓದುವುದು ಸಲೀಸಾಗುತ್ತದೆ; ಓದುವ ವೇಗವೂ ಹೆಚ್ಚುತ್ತದೆ. ಎಲ್ಲರೂ ಮೆಚ್ಚುವಂತೆ ಆಗುತ್ತದೆ. ಅಂತಹ ಕನ್ನಡ ಲಿಪಿಯು ಮಾದರಿ ಲಿಪಿಯಾಗುತ್ತದೆ.
ಸಂಯುಕ್ತಾಕ್ಷರರಹಿತ ಕನ್ನಡ ಲಿಪಿಯ ಅನುಗತ ಲಾಭಗಳು:
1. ಬೇರೆಲ್ಲಾ ಅಕ್ಷರಗಳಿಗೆ ಹೋಲಿಸಿದರೆ ಸಾಪೇಕ್ಷವಾಗಿ ಸಣ್ಣವಾದ ಒತ್ತಕ್ಷರಗಳನ್ನು ಓದಲು ಶ್ರಮಪಡುವಂತಿಲ್ಲ. ಬರೆಯುವುದೆಲ್ಲಾ ಒಂದೇ ಗಾತ್ರದ ಅಕ್ಷರಗಳಿಂದ ಕೂಡಿರುವುದರಿಂದ ಅದನ್ನು ಓದಲು ಸುಲಭ.
2. ವ್ಯಂಜನಗಳ ಒತ್ತಕ್ಷರಗಳನ್ನು ಮರೆತೇ ಬಿಡಬಹುದು. ಹೊಸದಾಗಿ ಕನ್ನಡ ಕಲಿಯುವರು ಒತ್ತಕ್ಷರಗಳನ್ನು ಕಲಿಯಲೇಬೇಕಾಗಿಲ್ಲ.
3. ಮಕ್ಕಳಿಗೆ ಮತ್ತು ಅನ್ಯ ಭಾಷಿಕರಿಗೆ ಇಂತಹ ಕನ್ನಡ ಲಿಪಿ ಕಲಿಯುವುದು ಸುಲಭ.

No comments:
Post a Comment