Monday, 18 February 2013

ಪಂಪನ ಬನವಾಸಿಯ ವ್‌ಯಾಮೋಹ (v1)

ಪಂಪನ ಬನವಾಸಿಯ ವ್‌ಯಾಮೋಹ
(ಮಹಾಕವಿ ಪಂಪನ ವಿಕ್‌ರಮಾರ್‌ಜುನ ವಿಜಯದ ನಾಲ್‌ಕನೇ ಆಶ್‌ವಾಸದಿಂದ)

ಚಂ||    ಸೊಗಯಿಸಿ ಬಂದ ಮಾಮರನೆ ತಳ್‌ತೆಲವಳ್‌ಳಿಯೆ ಪೂತ ಜಾತಿ ಸಂ|
    ಪಗೆಯೆ ಕುಕಿಲ್‌ವ ಕೋಗಿಲೆಯೆ ಪಾಡುವ ತುಂಬಿಯೆ ನಲ್‌ಲರೊಳ್‌ ಮೊಗಂ|
    ನಗೆಮೊಗದೊಳ್‌ ಪಳಂಚಲೆಯೆ ಕೂಡುವ ನಲ್‌ಲರೆ ನೋೞ್‌ಪೊಡಾವ ಬೆ|
    ಟ್‌ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್‌||        ೪-೨೮

    ಬನವಾಸಿ ದೇಶದೊಳ್‌ - ಬನವಾಸಿ ದೇಶದಲ್‌ಲಿ, ನೋೞ್‌ಪೊಡೆ - ನೋಡಿದರೆ, ಆವ ಬೆಟ್‌ಟುಗಳೊಳಂ - ಯಾವುದೇ ಬೆಟ್‌ಟಗಳಲ್‌ಲಾಗಲೀ, ಆವ ನಂದನವನಂಗಳೊಳಂ - ಯಾವುದೇ ಉದ್‌ಯಾನವನಗಳಲ್‌ಲಾಗಲೀ, ಸೊಗಯಿಸಿ ಬಂದ ಮಾಮರನೆ - ಸೊಗಸಾಗಿ ಬೆಳೆದ ಮಾವಿನ ಮರಗಳೇ, ತಳ್‌ತೆಲೆವಳ್‌ಳಿಯೆ - ದಟ್‌ಟವಾದ ವೀಳ್‌ಯದೆಲೆಯ ಬಳ್‌ಳಿಗಳೇ, ಪೂತ ಜಾತಿ ಸಂಪಗೆಯೆ - ಹೂಬಿಟ್‌ಟ ಒಳ್‌ಳೇ ಜಾತಿಯ ಸಂಪಗೆ ಮರಗಳೇ, ಕುಕಿಲ್‌ವ ಕೋಗಿಲೆಯೆ - ಕುಹೂ ಕುಹೂ ಎಂದು ಹಾಡುವ ಕೋಗಿಲೆಗಳೇ, ಪಾಡುವ ತುಂಬಿಯೆ - ಝೇಂಕರಿಸುವ ದುಂಬಿಗಳೇ, ನಲ್‌ಲರೊಳ್‌ಮೊಗಂ ನಗೆಮೊಗದೊಳ್‌ ಪಳಂಚಲೆಯೆ ಕೂಡುವ ನಲ್‌ಲರೇ - ಮುಖಗಳನ್‌ನು ತಾಗಿಸಿಕೊಂಡು ನಗುವಿನಿಂದ ಕುಳಿತ ಪ್‌ರೇಮಿಗಳೇ (ಕಾಣುವುದು).

೪-೨೮: ಈ ಪದ್‌ಯದಲ್‌ಲಿ ಮಹಾಕವಿ ಪಂಪನು ಬನವಾಸಿ ದೇಶದ ಸೊಬಗನ್‌ನು ವರ್‌ಣಿಸುತ್‌ತಿದ್‌ದಾನೆ: ಬನವಾಸಿ ದೇಶದ ಯಾವುದೇ ಬೆಟ್‌ಟಗಳಲ್‌ಲಾಗಲೀ, ಯಾವುದೇ ಉದ್‌ಯಾನವನಗಳಲ್‌ಲಾಗಲೀ ನೋಡಿದರೆ ನಮಗೆ ಕಾಣಿಸುವುದು - ಸೊಗಸಾದ ಫಲಭರಿತ ಮಾವಿನಮರಗಳೇ, ದಟ್‌ಟವಾಗಿ ಹಬ್‌ಬಿದ ವೀಳ್‌ಯದೆಲೆಯ ಬಳ್‌ಳಿಗಳೇ, ಹೂ ಬಿಟ್‌ಟ ಒಳ್‌ಳೆಯ ಜಾತಿಯ ಸಂಪಗೆ ಮರಗಳೇ, ಕುಹೂ ಕುಹೂ ಎಂದು ಹಾಡುವ ಕೋಗಿಲೆಗಳೇ, ಝೇಂಕರಿಸುವ ದುಂಬಿಗಳೇ ಹಾಗೂ ಮುಖಗಳನ್‌ನು ತಾಗಿಸಿಕೊಂಡು ನಗುವಿನಿಂದ ಕುಳಿತ ಪ್‌ರೇಮಿಗಳೇ.

ಉ||    ಚಾಗದ ಭೋಗದಕ್‌ಕರದ ಗೇಯದ ಗೊಟ್‌ಟಿಯಲಂಪಿನಿಂಪುಗ|
    ಳ್‌ಗಾಗರಮಾದ ಮಾನಸರೆ ಮಾನಸರಂತವರಾಗಿ ಪುಟ್‌ಟಲೇ|
    ನಾಗಿಯುಮೇನೋ ತೀರ್‌ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್‌|
    ಕೋಗಿಲೆಯಾಗಿ ಪುಟ್‌ಟುವುದು ನಂದನದೊಳ್‌ ಬನವಾಸಿ ದೇಶದೊಳ್‌||        ೪-೨೯

ಚಾಗದ - ತ್‌ಯಾಗದ, ಭೋಗದ - ಭೋಗದ, ಅಕ್‌ಕರದ - ವಿದ್‌ಯೆಯ, ಗೇಯದ ಗೊಟ್‌ಟಿಯ - ಸಂಗೀತ ಗೋಷ್‌ಠಿಯ, ಆಲಂಪಿನ - ಸೊಗಸಾದ, ಇಂಪುಗಳಿಗೆ - ಮಾಧುರ್‌ಯಕ್‌ಕೆ, ಆಗರವಾದ - ಆಶ್‌ರಯವಾದ, ಮಾನಸರೇ ಮಾನಸರ್‌ - ಮನುಷ್‌ಯರೇ ಮನುಷ್‌ಯರು, ಅಂತವರಾಗಿ ಪುಟ್‌ಟಲು - ಅಂತಹ ಮನುಷ್‌ಯರಾಗಿ ಹುಟ್‌ಟಲು, ಏನಾಗಿಯುಂ ಏನೋ ತೀರದಪುದೆ - ಏನಾದರೂ ಸಾಧ್‌ಯವಾಗಬಹುದೇ? ತೀರದೊಡೆ - ಹಾಗೆ ಸಾಧ್‌ಯವಾಗದಿದ್‌ದರೂ,  ಮಱಿದುಂಬಿಯಾಗಿ - ಮರಿದುಂಬಿಯಾಗಿ, ಮೇಣ್‌ - ಇಲ್‌ಲವೇ, ಕೋಗಿಲೆಯಾಗಿ ಪುಟ್‌ಟುವುದು - ಕೋಗಿಲೆಯಾಗಿ ಹುಟ್‌ಟಬೇಕು, ಬನವಾಸಿ ದೇಶದೊಳ್‌ - ಬನವಾಸಿ ದೇಶದಲ್‌ಲಿ.

೪-೨೯: ಈ ಪದ್‌ಯದಲ್‌ಲಿ ಮಹಾಕವಿ ಪಂಪನು ಬನವಾಸಿ ದೇಶದ ಬಗ್‌ಗೆ ತನಗಿರುವ ಉತ್‌ಕಟ ವ್‌ಯಾಮೋಹವನ್‌ನು ಬಣ್‌ಣಿಸಿದ್‌ದಾನೆ: ತ್‌ಯಾಗಕ್‌ಕೆ, ಭೋಗಕ್‌ಕೆ, ವಿದ್‌ಯೆಗೆ, ಸಂಗೀತ ಸಭೆಗಳ ಮಾಧುರ್‌ಯಕ್‌ಕೆ ಆಕರವಾದ ಮನುಷ್‌ಯರೇ ಮನುಷ್‌ಯರು. ಅಂತಹ ಮನುಷ್‌ಯರಾಗಿ ಏನಾದರೂ ಹುಟ್‌ಟಲು ಸಾಧ್‌ಯವೇ? ಹಾಗೆ ಸಾಧ್‌ಯವಾಗದಿದ್‌ದರೆ, ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್‌ಟಬೇಕು ಬನವಾಸಿ ದೇಶದಲ್‌ಲಿ.

ಉ||    ತೆಂಕಣ ಗಾಳಿ ಸೋಂಕಿದೆಡಮೊಳ್‌ನುಡಿಗೇಳ್‌ದೊಡಮಿಂಪನಾಳ್‌ದ ಗೇ|
    ಯಂ ಕಿವಿವೊಕ್‌ಕೊಡಂ ಬಿರಿದ ಮಲ್‌ಲಿಗೆಗಂಡೊಡಮಾದಲಂಪಲಂ|
    ಪಂ ಗೆಡೆಗೊಂಡೊಡಂ ಮಧುಮಹೋತ್‌ಸವಮಾದೊಡಮೇನನಂಬೆನಾ|
    ರಂಕುಸವಿಟ್‌ಟೊಡಂ ನೆನೆವುದೆನ್‌ನ ಮನಂ ಬನವಾಸಿ ದೇಶಮಂ||            ೪-೩೦

    ತೆಂಕಣ ಗಾಳಿ ಸೋಂಕಿದೊಡಂ - ದಕ್‌ಷಿಣ ದಿಕ್‌ಕಿನಿಂದ ಬೀಸುವ (ಹಿತವಾದ) ಗಾಳಿ ಸೋಕಿದರೂ, ಒಳ್‌ನುಡಿಗೇಳ್‌ದೊಡಂ - ಒಳ್‌ಳೆಯ ಮಾತುಗಳನ್‌ನು ಕೇಳಿದರೂ, ಇಂಪನಾಳ್‌ದ ಗೇಯಂ ಕಿವಿವೊಕ್‌ಕಡಂ - ಇಂಪಾದ ಗಾನ ಕಿವಿಗೆ ಬಿದ್‌ದರೂ, ಬಿರಿದ ಮಲ್‌ಲಿಗೆಗಂಡೊಡಂ - ಅರಳಿದ ಮಲ್‌ಲಿಗೆಯನು ಕಂಡರೂ, ಆದ ಅಲಂಪಲಂಪಂ ಗೆಡೆಗೊಂಡೊಡಂ - ಎರಡು ಪ್‌ರೀತಿಗಳು ಸೇರಿದರೂ, ಮಧುಮಹೋತ್‌ಸವಮಾದೊಡಂ - ವಸಂತೋತ್‌ಸವವಾದರೂ, ಏನನಂಬೆನು - ಏನು ಹೇಳಲಿ, ಆರಂಕುಸವಿಟ್‌ಟೊಡಂ - ಯಾರೇ ಅಡ್‌ಡಿಪಡಿಸಿದರೂ, ನೆನೆವುದೆನ್‌ನ ಮನಂ ಬನವಾಸಿ ದೇಶಮಂ - ನನ್‌ನ ಮನಸ್‌ಸ ಬನವಾಸಿ ದೇಶವನ್‌ನೇ ನೆನೆಯುತ್‌ತದೆ.

೪-೩೦: ಈ ಪದ್‌ಯದಲ್‌ಲಿ ಮಹಾಕವಿ ಪಂಪನು ಬನವಾಸಿ ದೇಶದ ಬಗ್‌ಗೆ ತನಗಿರುವ ಉತ್‌ಕಟ ವ್‌ಯಾಮೇಹವನ್‌ನು ಮತ್‌ತೊಮ್‌ಮೆ ಮನೋಜ್‌ಞವಾಗಿ ಬಣ್‌ಣಿಸಿದ್‌ದಾನೆ: ದಕ್‌ಷಿಣ ದಿಕ್‌ಕಿನಿಂದ ಹಿತವಾಗಿ ಬೀಸುವ ಗಾಳಿ ಸೋಕಿದರೂ, ಒಳ್‌ಳೆಯ ಮಾತುಗಳನ್‌ನು ಕೇಳಿದರೂ, ಇಂಪಾದ ಗಾನ ಕಿವಿಗೆ ಬಿದ್‌ದರೂ, ಅರಳಿದ ಮಲ್‌ಲಿಗೆಯನ್‌ನು ಕಂಡರೂ, ಎರಡು ಪ್‌ರೀತಿಗಳು ಸೇರಿದರೂ, ವಸಂತೋತ್‌ಸವಾದರೂ, ಏನು ಹೇಳಲಿ? ಯಾರೇ ಅಡ್‌ಡಿಪಡಿಸಿದರೂ, ನನ್‌ನ ಮನಸ್‌ಸು ಬನವಾಸಿ ದೇಶವನ್‌ನೇ ನೆನೆಯುತ್‌ತದೆ.

No comments:

Post a Comment