ಲಿಪಿ ಸುಧಾರಣೆ ಕುರಿತ ನನ್ನ ಲೇಖನಗಳು ಮತ್ತು ಕಥೆಗಳು

Deliberations on Reformation of Writing System of Kannada Language


It can be argued that the process of writing syllables in Kannada becomes easier once the alphabet, diacritics for vowels and conjunct forms of consonants are committed to memory and systematic approach to form asyllable is mastered. It is true that once the writing system is mastered completely, reading and writing of Kannada becomes less difficult.However complexity of learning factors make learning Kannada writing system quite difficult. Psychological aspects are often neglected.Linguistic psychology has a role to play here


ಕನ್ನಡ ಭಾಷೆಯ ಬರಹ ಪದ್ಧತಿಯ ಸುಧಾರಣೆ ಅವಶ್ಯಕತೆ ಕುರಿತ ಒಂದು ಅವಲೋಕನ


ಒತ್ತಕ್ಷರಗಳುಳ್ಳ ಸಂಯುಕ್ತಾಕ್ಷರಗಳು ಧ್ವನ್ಯಾತ್ಮಕ ಬರಹ ಪದ್ಧತಿಯ ಆಧಾರ ಸೂತ್ರಕ್ಕೆ ಅನುಗುಣವಾಗಿಲ್ಲ. ಸಂಯುಕ್ತಾಕ್ಷರದ ಕೊನೆಯಲ್ಲಿ ಬರುವ ಸ್ವರವು ತನ್ನ ಹಿಂದಿನ ವ್ಯಂಜನಕ್ಕೆ ಸೇರಿದ್ದು. ಆದರೆ ಅದನ್ನು ಸಂಯುಕ್ತಾಕ್ಷರದ ಮೊದಲನೇ ವ್ಯಂಜನಕ್ಕೆ ಲಗತ್ತಿಸಲಾಗುತ್ತದೆ! ಯಾವ ವ್ಯಂಜನಕ್ಕೆ ಸ್ವರವು ಸಂಬಂಧಿಸಿರುತ್ತದೋ ಆ ವ್ಯಂಜನವನ್ನು ಒತ್ತಕ್ಷರವಾಗಿ ಕೆಳಗೆ ಸಣ್ಣಗೆ ಬರೆಯಲಾಗುತ್ತದೆ. ಸಂಬಂಧಿಸದ ವ್ಯಂಜನಕ್ಕೆ ಸ್ವರವನ್ನು ಸೇರಿಸಿ ಬರೆಯಲಾಗುತ್ತದೆ. ಇದೆಂತಹ ವಿರೋಧಾಭಾಸ? ಈ ತರಹದ ಸಂಯುಕ್ತ ಚಿಹ್ನೆಗಳು ವ್ಯತಿಕ್ರಮವೂ ಹಾಗೂ ಮನಸ್ಸಿಗೆ ತ್ರಾಸ ಕೊಡುವಂತಹವೂ ಆಗಿವೆ... ವ್ಯತಿಕ್ರಮ ಹಾಗೂ ಸಂದಿಗ್ಧಗಳಿಂದ ಮನಸ್ಸಿನ ಮೇಲಾಗುವ ಒತ್ತಡವನ್ನು ನಿರ್ಲಕ್ಷಿಸಲಾಗದು. ಈ ವಿಚಾರದ ಬಗ್ಗೆ ಅವಶ್ಯವಿರುವ ಗಮನ ಹರಿದೇ ಇಲ್ಲ. ಭಾಷಾಮನೋವೈಜ್ಞಾನಿಕ ಶಾಸ್ತ್ರವು ಈ ಬಗ್ಗೆ ಬೆಳಕು ಚೆಲ್ಲಬಹುದು.


ಕೇವಲ ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತನಲ್ಲಾ ಆ ಚಿಕ್ಕ ಹುಡುಗ


ನನ್ನ ಮನ ಕಲಕಿದ ಒಂದು ದುರ್ಘಟನೆ. ಕೇವಲ ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತನಲ್ಲಾ ಆ ಚಿಕ್ಕ ಹುಡುಗ.


ಮಂತ್ರಿಸಿದ ನಿಂಬೆಹಣ್ಣು ಹೇಗೆ ಮಾಯವಾಯಿತು!?


ಮಧ್ಯಾಹ್ನ ಊಟವಾದ ನಂತರ್ ಸ್ವಲ್ಪ ಮಲಗಿದ್ದೆ. ನನ್ನ ಶ್ರೀಮತಿ "ಏನ್ ರೀ, ಬನ್ನಿ ಇಲ್ಲಿ ಬೇಗ", ಎಂದು ಜೋರಾಗಿ ಕರೆದಳು. "ಏನು? ಬಂದೆ", ಅನ್ನುತ್ತಾ ನಾನು ಬೆಡ್‌ರೂಂನಿಂದ ಬಂದೆ. ನನ್ನ ಹೆಂಡತಿ ಪೂಜಾರೂಂನಲ್ಲಿದ್ದಳು. "ಏನಾಯಿತು?" ಎಂದೆ. "ನೋಡೀಂದ್ರೆ, ಮಂತ್ರಿಸಿದ ನಿಂಬೆಹಣ್ಣೂ ಇಲ್ಲ. ಮಾಯವಾಗಿದೆ", ಎಂದಳು. ಅವಳ ಕೈಯಲ್ಲಿ ಅರಿಸಿನದ ದಾರ ಗೋಜಲಾಗಿ ಉಂಡೆಯಂತೆ ಅವಳ ಕೈಯಲ್ಲಿತ್ತು. ಅವಳ ಕೈ ಅರಿಸಿನ ಕುಂಕುಮದ ಓಕಳೀ ನೀರಿನಲ್ಲಿ ಅದ್ದಿದಂತಿತ್ತು.


ಕಾಫಿ ಕಪ್ಪಿನ ತಳದಲ್ಲಿ ಏನಿತ್ತು?


"ಮೇಡಂ, ನೋಡಿ ಇಲ್ಲಿ", ಎಂದು ಆ ಕಾಫಿ ಲೋಟವನ್ನು ಅವರಿಗೆ ತೊರಿಸಿದಳು. ಅವರು ಹತ್ತಿರ ಬಂದು ಆ ಲೋಟವನ್ನು ಇಸಕೊಂಡು "ಏನು?", ಎಂದರು. "ಕಪ್‌ನ ಒಳಗಡೆ ನೋಡಿ", ಎಂದಳು ವಿದೇಶೀ ಮಹಿಳೆ. "ಅರೆ, ಇದೇನು? ಇದರ ತಳದಲ್ಲಿ ’ಓಂ’ ಅಂತಾ ಇದೆ! ಹೇಗೆ ಬಂತು ಇದು?" ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಆಗ ಆ ವಿದೇಶೀ ಮಹಿಳೆ ಎದ್ದು ನಿಂತು, "ಈ ಕಪ್‌ನ ವಿಶೇಷ ಏನು ಅಂದರೆ .....


ಪಂಪನ ಬನವಾಸಿ


ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ ...  ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ.


ಶೀಘ್ರಲಿಪಿ ಮತ್ತು ಕನ್ನಡ


    ಒಂದು ಲಿಪಿಯನ್ನು ಕಲಿಯುವಾಗಿನ ಕಷ್ಟವನ್ನು ಕುರಿತ ಒಂದು ಕಿರುನೋಟ.


ಕನ್ನಡ ಒತ್ತಕ್ಷರಗಳ ಬಗ್ಗೆ


    ಕನ್ನಡದಲ್ಲಿ ಒತ್ತಕ್ಷರಗಳನ್ನು ಬರೆಯುವ ರೀತಿ ಕುರಿತು ಒಂದು ಉದಾಹರಣೆ.

No comments:

Post a Comment