Monday, 11 February 2013

ಕೃಷ್‌ಣಮ್‌ಮನ ದೆವ್‌ವ (v1)

ಕೃಷ್‌ಣಮ್‌ಮನ ದೆವ್‌ವ

ನಾನಾಗ ಪ್‌ರೈಮರಿ ಏಳನೇ ಕ್‌ಲಾಸ್‌‌ನಲ್‌ಲಿ ಓದುತ್‌ತಿದ್‌ದೆ. ತುಮಕೂರಿನ ಸಂಪಂಗಿರಾಮನಗರ ಪ್‌ರದೇಶದಲ್‌ಲಿ ನಮ್‌ಮ ಮನೆ ಇತ್‌ತು. ಊರಿನ ಅಂಚಿನಲ್‌ಲಿದ್‌ದ ಮನೆಗಳಲ್‌ಲಿ ನಮ್‌ಮ ಮನೆಯೂ ಒಂದು. ಮನೆಯಿಂದ ಸ್‌ವಲ್‌ಪ ದೂರದ ನಂತರ ಬಯಲು. ಹುಲ್‌ಲು, ಪೊದೆಗಳು ಮತ್‌ತು ಅಲ್‌ಲಲ್‌ಲಿ ಮರಗಳು. ಒಂದೆರಡು ಕಾಲುದಾರಿಗಳು ಇದ್‌ದವು. ಹುಣಿಸೇಮರ, ಆಲದ ಮರ, ಹಲಸಿನ ಮರ, ಹೊಂಗೆ ಮರಗಳು ಹೆಚ್‌ಚಾಗಿದ್‌ದವು. ಹಲವು ಮರಗಳಿಗೆ ಹಬ್‌ಬಿಕೊಂಡು ದಟ್‌ಟವಾಗಿ ಬೆಳೆದಿದ್‌ದ ಹಲವು ರೀತಿಯ ಬಳ್‌ಳಿಗಳು. ದೂರದಲ್‌ಲಿ ಕೆರೆ. ಕೆರೆಯತ್‌ತ ಇಳಿಯುತ್‌ತಿರುವ ಬಯಲು ಅದು. ರಾತ್‌ರಿಯಲ್‌ಲಿ ಅತ್‌ತ ಹೋಗಲು ಭಯವಾಗುತ್‌ತಿತ್‌ತು.
ನಮ್‌ಮ ಮನೆಯಿಂದ ಅನತಿ ದೂರದಲ್‌ಲಿ ಒಂದು ಪಾಳು ಮನೆ. ಯಾವ ದುರಸ್‌ತಿಯೂ ಇಲ್‌ಲದೇ ವರ್‌ಷಗಟ್‌ಟಲೇ ಮಳೆ ಮತ್‌ತು ಬಿಸಿಲಿಗೆ ಮೈ ಒಡ್‌ಡಿ ಬಹಳ ಶಿಥಿಲವಾಗಿದ್‌ದ ಮನೆ. ಅಲ್‌ಲಲ್‌ಲಿ ಬಿರುಕು ಬಿಟ್‌ಟ ಗೋಡೆ, ಬಣ್‌ಣವೆಲ್‌ಲಾ ಕರಗಿ, ಕೆಲವೆಡೆ ಇಟ್‌ಟಿಗೆಯೂ ಕರಗಿ, ಅಲ್‌ಲಲ್‌ಲಿ ಬಿದ್‌ದು ಹೋಗಿದ್‌ದ ಪಾಳು ಗೋಡೆಗಳು. ಬಾಗಿಲು ಮತ್‌ತು ಕಿಟಕಗಳಿದ್‌ದ ಜಾಗದಲ್‌ಲಿ ಏನೂ ಇಲ್‌ಲ. ಜೇಡರ ಬಲೆ ಅಲ್‌ಲಲ್‌ಲಿ. ಕೆಲವೆಡೆ ಗೋಡೆಗೆ ಹಬ್‌ಬಿದ ಬಳ್‌ಳಿಗಳು. ಆ ಮನೆಯ ಹಿತ್‌ತಲಿದ್‌ದ ಜಾಗದಲ್‌ಲಿ ಒಂದು ಮುದಿ ಹುಣಿಸೇಮರ. ನೋಡಲು ಹೆದರಿಕೊಳ್‌ಳುವಂತಿತ್‌ತು ಆ ಮನೆ. ಆ ಮನೆಯನ್‌ನು ದೆವ್‌ವದ ಮನೆಯೆಂದು ಅಲ್‌ಲಿನ ಜನರು ಹೇಳಿತ್‌ತಿದ್‌ದರು. ಹಲವು ವರ್‌ಷಗಳ ಹಿಂದೆ ಆ ಮನೆಯಲ್‌ಲೇ ತೀರಿಕೊಂಡಿದ್‌ದ ಕೃಷ್‌ಣಮ್‌ಮ ಎಂಬ ಒಬ್‌ಬ ಮುದಿ ಹೆಂಗಸಿನ ದೆವ್‌ವ ಆ ಮನೆಯಲ್‌ಲಿ ಇದೆ ಎಂದು ಜನರಂದುಕೊಳ್‌ಳುತ್‌ತಿದ್‌ದರು. ಕೆಲವೊಮ್‌ಮೆ ಆ ಮನೆಯಿಂದ ನಾಯಿ ಗೀಳಿಡುವ ಶಬ್‌ದ ಕೇಳಿ ಬರುತ್‌ತಿತ್‌ತು. ಕೆಲವೊಮ್‌ಮೆ ಪುಟ್‌ಟ ಪಾಪುವೊಂದು ಅಳುತ್‌ತಿರುವಂತಹ ಶಬ್‌ದ ಕೇಳಿ ಬರುತ್‌ತಿತ್‌ತು. ಜೊತೆಯಲ್‌ಲಿ ನಾಯಿಗಳು ಜೋರಾಗಿ ಬೊಗಳುವ ಶಬ್‌ದ ಸಹ ಕೇಳಬರುತ್‌ತಿತ್‌ತು. ಒಟ್‌ಟಿನಲ್‌ಲಿ ಅತ್‌ತ ಕಡೆ ಜನ ಅಷ್‌ಟಾಗಿ ಓಡಾಡುತ್‌ತಿರಲಿಲ್‌ಲ. ಒಮ್‌ಮೊಮ್‌ಮೆ ಕತ್‌ತಲಾದ ಮೇಲೂ ನನ್‌ನ ತಾಯಿ ಅಡಿಗೆಗೆ ಬೇಕಾದ ಸಾಮಾನನ್‌ನು ತರಲು ನನ್‌ನನ್‌ನು ಅಂಗಡಿಗೆ ಕಳುಹಿಸುತ್‌ತಿದ್‌ದರು. ಆಂಗಡಿಗೆ ಹೋಗುವಾಗ ಆ ಮನೆ ಕಾಣುತ್‌ತಿತ್‌ತು. ಜೋರಾಗಿ ಓಡಿ ಅಂಗಡಿಯನ್‌ನು ತಲುಪುತ್‌ತಿದ್‌ದೆ. ಆ ಮನೆಯತ್‌ತ ನೋಡುತ್‌ತಲೂ ಇರಲಿಲ್‌ಲ. ವಾಪಸ್‌ ಬರುವಾಗ ಸಹ ಜೋರಾಗಿ ಓಡಿ ಮನೆಗೆ ಬರುತ್‌ತಿದ್‌ದೆ. ಎಲ್‌ಲರೂ ಆ ಮನೆ ಬಗ್‌ಗೆ ಹೇಳಿದ್‌ದು ಮನಸ್‌ಸಿನಲ್‌ಲಿ ಉಳಿದಿತ್‌ತು. ಕತ್‌ತಲೆಯಲ್‌ಲಂತೂ ಆ ಮನೆಯತ್‌ತ ನೋಡಲೂ ಹೆದರುತ್‌ತಿದ್‌ದೆ.
ನಮ್‌ಮ ಶಾಲೆಯ ಕನ್‌ನಡ ಸಂಘದ ವತಿಯಿಂದ ವಾರ್‌ಷಿಕೋತ್‌ಸವ ಸಮಾರಂಭ ನಡೆಯಿತು. ಆ ಸಮಾರಂಭಕ್‌ಕೆ ಅತಿಥಿಯಾಗಿ ಆಗಮಿಸಿದ್‌ದ ಹಿರಿಯರು ತಮ್‌ಮ ಭಾಷಣದಲ್‌ಲಿ ನಮಗೆ ಕೆಲವು ಮಾತುಗಳನ್‌ನು ಹೇಳಿದರು. ವಿದ್‌ಯೆಯ ಮಹತ್‌ವ, ತರ್‌ಕಬದ್‌ಧ ಆಲೋಚನೆ, ವೈಜ್‌ಞಾನಿಕ ಮನೋಭಾವ ಎಂದೆಲ್‌ಲಾ ಮಾತನಾಡಿದರು. ಮೂಢನಂಬಿಕೆಗಳ ಬಗ್‌ಗೆ ಮಾತನಾಡಿದರು. ನಾವು ಯಾವುದನ್‌ನೂ ಸುಮ್‌ಮನೆ ಒಪ್‌ಪಬಾರದು. ಸರಿಯಾಗಿ ಆಲೋಚಿಸಿ ನೋಡಬೇಕು. ’ಪ್‌ರತ್‌ಯಕ್‌ಷವಾದರೂ ಪ್‌ರಮಾಣಿಸಿ ನೋಡು’ ಎಂದು ಅದಕ್‌ಕೇ ಹಿರಿಯರು ಹೇಳುವುದು ಎಂದೆಲ್‌ಲಾ ಹೇಳಿದರು. ನನಗೆ ಮತ್‌ತು ನನ್‌ನ ಅಣ್‌ಣನಿಗೆ ಈ ಮಾತುಗಳು ಬಹಳ ಹಿಡಿಸಿದವು. ನನ್‌ನ ಅಣ್‌ಣ ಅದೇ ಶಾಲೆಯಲ್‌ಲಿ ಎಸ್‌.ಎಸ್‌.ಎಲ್‌.ಸಿ. ಯಲ್‌ಲಿ ಓದುತ್‌ತಿದ್‌ದ. ನಮಗೆ ಆ ಹಿರಿಯರು ಹೇಳಿದ ಮಾತುಗಳು ಬಹಳ ಪ್‌ರಭಾವ ಬೀರಿದವು. ನಮ್‌ಮ ಕನ್‌ನಡ ಮೇಷ್‌ಟರನ್‌ನು ಆ ಹಿರಿಯರ ಬಗ್‌ಗೆ ವಿಚಾರಿಸಿದೆವು. ನಮ್‌ಮ ಮೇಷ್‌ಟ್‌ರು ಹೇಳಿದರು, ’ನಿಮಗೆ ಗೊತ್‌ತಾ ಅವರು ಒಬ್‌ಬ ದೊಡ್‌ಡ ವಿಜ್‌ಞಾನಿಗಳು. ಇದೇ ಊರಿನವರು. ಅವರು ಹೈಸ್‌ಕೂಲ್‌‌ವರೆಗೆ ಇದೇ ಸ್‌ಕೂಲ್‌‌ನಲ್‌ಲಿ ಓದಿದ್‌ದು. ಈಗ ಅಮೆರಿಕಾದ ಅಂತರಿಕ್‌ಷ ಸಂಶೋದನಾ ಸಂಸ್‌ಥೆಯಲ್‌ಲಿ ಹಿರಿಯ ವಿಜ್‌ಞಾನಿಯಾಗಿ ಕೆಲಸ ಮಾಡುತ್‌ತಿದ್‌ದಾರೆ. ತಾವು ಓದಿದ ಶಾಲೆ ಎಂಬ ಅಭಿಮಾನದಿಂದ ನಮ್‌ಮ ಕಾರ್‌ಯಕ್‌ರಮಕ್‌ಕೆ ಬಂದಿದ್‌ದರು.’ ಆವರು ಇನ್‌ನೊಂದೆರಡು ದಿನ ಇಲ್‌ಲೇ ಇರುತ್‌ತಾರೆ ಎಂದು ಗೊತ್‌ತಾಗಿ ನಮ್‌ಮ ಕನ್‌ನಡ ಮೇಷ್‌ಟರ ಜೊತೆ ಅವರ ಮನೆಗೆ ಹೋದೆವು. ಅವರಿಗೆ ನಮ್‌ಮನ್‌ನು ಕಂಡು ಬಹಳ ಸಂತಸವಾಯಿತು. ಅವರ ಜೊತೆ ಮಾತನಾಡುತ್‌ತಿದ್‌ದಾಗ, ನಾನು ಅವರಿಗೆ ಕೃಷ್‌ಣಮ್‌ಮನ ದೆವ್‌ವ ಮತ್‌ತು ಆಕೆ ಸತ್‌ತ ಮನೆ ಬಗ್‌ಗೆ ತಿಳಿಸಿದೆ. ಅದಕ್‌ಕೆ ಅವರು ಹೇಳಿದರು, ’ದೆವ್‌ವ, ಭೂತ ಎಂಬುವೆಲ್‌ಲಾ ನಮ್‌ಮ ಕಲ್‌ಪನೆಗಳು. ನಿಜವಲ್‌ಲ. ಕೆಲವು ದುರ್‌ಬಲ ಮನಸ್‌ಸಿನ ಜನರ ಮೇಲೆ ಇಂತಹ ವಿಷಯಗಳು ಪರಿಣಾಮ ಬೀರಬಹುದು. ಅಷ್‌ಟೇ. ಅದಕ್‌ಕೇ ನಿನ್‌ನೆ ಫ಼ಂಕ್‌ಷನ್‌‌ನಲ್‌ಲಿ ನಾನು ನಿಮಗೆಲ್‌ಲಾ ಹೇಳಿದ್‌ದು ಪ್‌ರತ್‌ಯಕ್‌ಷವಾದರೂ ಪ್‌ರಮಾಣಿಸಿ ನೋಡು ಅಂತ’’.
ನಾನು ಮತ್‌ತು ನನ್‌ನ ಅಣ್‌ಣ ಈ ಬಗ್‌ಗೆಯೇ ಯೋಚಿಸುತ್‌ತಿದ್‌ದೆವು. ಇದಾಗಿ ಒಂದು ವಾರವಾಗಿರಬಹುದು. ಅಂದು ರಾತ್‌ರಿ ಮನೆಯಲ್‌ಲಿ ಎಲ್‌ಲರೂ ಊಟ ಮುಗಿಸಿ ನಿದ್‌ರೆ ಮಾಡುತ್‌ತಿದ್‌ದೆವು. ನನಗೆ ಚೆನ್‌ನಾಗಿ ನಿದ್‌ರೆ ಬಂದಿತ್‌ತು. ’ಏಳೋ, ರವಿ. ಎದ್‌ದೇಳೋ", ಎಂದು ನನ್‌ನ ಆಣ್‌ಣ ನನ್‌ನನ್‌ನು ನಿದ್‌ರೆಯಿಂದ ಏಳಿಸಿದ. ’ಏನಣ್‌ಣ, ನಂಗೆ ನಿದ್‌ದೆ", ಎಂದೆ. ಅದಕ್‌ಕೆ ಅವನು "ಆಮೇಲೆ ನಿದ್‌ದೆ ಮಾಡುವೆ. ಈಗ ನನ್‌ನ ಜೊತ ಬಾ", ಎಂದು ನನ್‌ನನ್‌ನು ತನ್‌ನ ಜೊತೆ ಕರೆದುಕೊಂಡು ಸದ್‌ದಿಲ್‌ಲದೆ ಮನೆಯಿಂದ ಹೊರಗೆ ಬಂದ. ನಾಯಿಗಳು ಬೊಗಳುತ್‌ತಾ ಓಡುತ್‌ತಿರುವುದು ಕೇಳಿಸಿತು. ಎರಡು ನಾಯಿಗಳು ಕೃಷ್‌ಣಮ್‌ಮನ ಪಾಳು ಮನೆ ಕಡೆ ಓಡುತ್‌ತಿರುವುದು ಬೀದಿ ದೀಪದಲ್‌ಲಿ ಮಸುಕಾಗಿ ಕಾಣಿಸಿತು. ಅಣ್‌ನ ತನ್‌ನ ಕೈಯಲ್‌ಲಿ ಅಪ್‌ಪನ ದೊಡ್‌ಡ ಬ್‌ಯಾಟರಿ ಇಟ್‌ಟುಕೊಂಡಿದ್‌ದ. ಅದನ್‌ನು ಆನ್‌ ಮಾಡಿಕೊಂಡು ನನ್‌ನನ್‌ನು ಕೈ ಹಿಡಿದು ಕರೆದುಕೊಂಡು ಆತ್‌ತ ಕಡೆಯೇ ಹೊರಟ. ನನಗೆ ಹೆದರಿಕೆಯಾಗುತ್‌ತಿತ್‌ತು. ಅಣ್‌ಣನ ಜೊತೆಯಲ್‌ಲಿದುದರಿಂದ ನಾನು ಅವನ ಜೊತೆ ನಡೆದೆ. ಆ ಎರಡು ನಾಯಿಗಳನ್‌ನು ಅನುಸರಿಸಿಕೊಂಡು ನಾವಿಬ್‌ಬರೂ ಆ ಮನೆ ಕಡೆ ಹೋದೆವು . ಸ್‌ವಲ್‌ಪ ಸಮಯದಲ್‌ಲೇ ನಾಯಿಗಳು ಆ ಮನೆಯ ಹತ್‌ತಿರವಿದ್‌ದ ಹುಣೀಸೇಮರವೊಂದರ ಕೆಳಗೆ ನಿಂತು ಮರದೆ ಮೇಲೆ ನೋಡುತ್‌ತಾ ಒಂದೇ ಸಮನೆ ಜೋರಾಗಿ ಬೊಗಳುತ್‌ತಿದ್‌ದವು. ಅಣ್‌ಣನ ಬ್‌ಯಾಟರಿ ಬೆಳಕು ಅವುಗಳ ಮೇಲೆ ಬಿದ್‌ದುದನ್‌ನು ನೋಡಿ ಅವು ಇನ್‌ನೂ ಜೋರಾಗಿ ಬೊಗಳಲು ಷುರು ಮಾಡಿದವು. ನಾಯಿಗಳ ಬೊಗಳುವ ಶಬ್‌ದದ ಜೊತೆಗೆ ಆ ಮರದ ಮೇಲಿನಿಂದ ಸಣ್‌ಣ ಮಗುವೊಂದು ಜೋರಾಗಿ ಅಳುವ ಶಬ್‌ದ ಬರಲಾರಂಭಿಸಿತು. ನನಗೆ ಬಹಳ ಹೆದರಿಕೆಯಾಯಿತು. ’ಅಣ್‌ಣಾ, ಬೇಡ ಬಾರೋ ಹೋಗೋಣ’, ಏಂದು ಹೇಳಿದೆ. ’ಏನಿಲ್‌ಲ. ಏಕೋ ಹೆದರ‍್‌ಕೋತೀಯಾ? ನಾನಿಲ್‌ವಾ? ಏನೂಂತ ನೋಡೋಣ ಇರು’, ಎನ್‌ನುತ್‌ತಾ ನನ್‌ನನ್‌ನು ಎಳೆದುಕೊಂಡು ಆ ಮರದ ಹತ್‌ತಿರಕ್‌ಕೆ ನಡೆದ. ಅಲ್‌ಲಿ ಮರದ ಮೇಲೆ ಒಂದು ಬೆಕ್‌ಕಿನ ಮರಿ ಅರಚುತ್‌ತಿತ್‌ತು. ಅದು ಅರಚುತ್‌ತಿದ್‌ದ ರೀತಿ ಸಣ್‌ಣ ಮಗುವೊಂದು ಅಳುವಂತೆಯೇ ಇತ್‌ತು. ನನಗೆ ಆಶ್‌ಚರ‍್‌ಯವಾಯಿತು. ಏನೂ ವ್‌ಯತ್‌ಯಾಸವೇ ಇಲ್‌ಲ ಅನ್‌ನುವಷ್‌ಟರ ಮಟ್‌ಟಿಗೆ ಆ ಬೆಕ್‌ಕಿನ ಮರಿಯ ಅರಚಾಟ ಪುಟ್‌ಟ ಮಗುವಿನ ಆಕ್‌ರಂದನದಂತೆಯೇ ಇತ್‌ತು! ಆಗ ನಮಗೆ ಅರ್‌ಥವಾಯಿತು- ಈ ಎರಡು ನಾಯಿಗಳೂ ಆ ಬೆಕ್‌ಕಿನ ಮರಿಯನ್‌ನು ಅಟ್‌ಟಿಸಿಕೊಂಡು ಬಂದಿದ್‌ದವು. ಆ ಬೆಕ್‌ಕಿನ ಮರಿ ಓಡಿ ಬಂದು ಮರವನ್‌ನೇರಿ ಬಿಟ್‌ಟಿತ್‌ತು. ಮರದ ಕೆಳಗಡೆ ಆ ಎರಡು ನಾಯಿಗಳು ಒಂದೇ ಸಮನೆ ಬೊಗಳುತ್‌ತಿದ್‌ದುದರಿಂದ ಅದು ಹೆದರಿಕೊಂಡು ಅರಚಾಡುತ್‌ತಿತ್‌ತು. ಒಂದೈದು ನಿಮಿಷವೂ ಕಳೆದಿರಲಿಲ್‌ಲವೇನೋ. ಅಷ್‌ಟರಲ್‌ಲಿ ನಮ್‌ಮ ತಂದೆ ಮತ್‌ತು ನಮ್‌ಮ ಸೋದರ ಮಾವ ಇಬ್‌ಬರೂ ನಾವಿದ್‌ದಲ್‌ಲಿಗೆ ಬಂದರು. ’ಎನ್‌ರೋ ಇದು ನೀವು ಮಾಡ್‌ತಾ ಇರೋದು? ಇಲ್‌ಲೆಲ್‌ಲಾ ಬರಬಾರದು ಅಂತ ಗೊತ್‌ತಿಲ್‌ವಾ?’, ಎಂದು ನಮ್‌ಮ ತಂದೆ ಬಯ್‌ದರು. ನನ್‌ನ ಅಣ್‌ಣ ’ಶ್‌’ ಎಂದು ಮೆಲ್‌ಲಗೆ ಹೇಳಿ ’ನೋಡಿ ಅಲ್‌ಲಿ’, ಎಂದು ಮರದ ಮೇಲಿದ್‌ದ ಆ ಬೆಕ್‌ಕಿನ ಮರಿಯತ್‌ತ ಬ್‌ಯಾಟರಿ ಬೆಳಕು ಹರಿಸಿದ. ಬೆಕ್‌ಕಿನ ಮರಿ ನಡುಗುತ್‌ತಾ ಅರುಚುತ್‌ತಾ ಒದ್‌ದಾಡುತ್‌ತಿದ್‌ದುದನ್‌ನು ನಮ್‌ಮ ತಂದೆ ಮತ್‌ತು ನಮ್‌ಮ ಸೋದರ ಮಾವ ನೋಡಿದರು. ಅವರಿಗೂ ಬೆಕ್‌ಕಿನ ಮರಿಯ ಅರಚಾಟ ಸಣ್‌ಣ ಕೂಸಿನ ಅಳುವಿನಂತಿರುವುದು ಕೇಳಿಸಿತು. ನಮ್‌ಮ ಸೋದರಮಾವ ಸಣ್‌ಣ ಕಲ್‌ಲೊಂದನ್‌ನು ಎತ್‌ತಿಕೊಂಡು ಆ ನಾಯಿಗಳತ್‌ತ ಎಸೆದರು. ಆ ನಾಯಿಗಳು ಕುಂಯ್‌‌ಗುಡುತ್‌ತಾ ಓಡಿಹೋದವು. ನಾಯಿಗಳು ಹೋದ ಸ್‌ವಲ್‌ಪ ಸಮಯದ ನಂತರ ಬೆಕ್‌ಕಿನ ಮರಿ ನಿಧಾನವಾಗಿ ಇಳಿದು ಬೇರೊಂದು ದಿಕ್‌ಕಿನತ್‌ತ ಓಡಿ ಹೋಯಿತು. ’ನಡೀರಿ ಮನೆಗೆ’, ಎಂದು ನಮ್‌ಮಪ್‌ಪ ರೇಗಿದರು. ಎಲ್‌ಲರೂ ಮನೆಗೆ ಹೋದೆವು.
ಮಾರನೆಯ ದಿನ ಬೆಳಿಗ್‌ಗೆ ನನ್‌ನ ಅಜ್‌ಜಿ ನನ್‌ನ ತಂದೆಯನ್‌ನು ಕೇಳುತ್‌ತಿದ್‌ದರು, ’ವೆಂಕಿ, ಏನೋ ಅದು ನಿನ್‌ನೆ ರಾತ್‌ರಿ ಗಲಾಟೆ?’ ನನ್‌ನ ತಂದೆ ಹಿಂದಿನ ರಾತ್‌ರಿ ಆದುದ್‌ದನ್‌ನೆಲ್‌ಲಾ ತಮ್‌ಮ ತಾಯಿಗೆ ವಿವರಿಸಿ ಹೇಳಿದರು. ’ಹೌದೇನೋ? ಹುಡುಗು ಮುಂಡೇವು ಏನು ಧೈರ್‌ಯ ಅವಕ್‌ಕೆ!’ ಎಂದು ಹೇಳಿದ ನಮ್‌ಮ ಅಜ್‌ಜಿ ಮುಂದುವರಿಸಿದರು, ’ನನಗೆ ಮೊದಲಿನಿಂದಲೂ ಅನುಮಾನ ಇತ್‌ತು. ಎಂಥಾ ಒಳ್‌ಳೇ ಹೆಂಗಸು. ಅವಳು ದೆವ್‌ವ ಆಗೋದು ಅಂದರೆ ನನಗೆ ಏಕೋ ನಂಬೋಕೇ ಆಗ್‌ತಾ ಇರ್‌ಲಿಲ್‌ಲ.’ ನಮ್‌ಮ ತಂದೆ ಕೆಲಸಕ್‌ಕೆ ಹೊರಟ ಮೇಲೆ ನಾನು ಮತ್‌ತು ನನ್‌ನ ಅಣ್‌ಣ ನಮ್‌ಮ ಅಜ್‌ಜಿಯ ರೂಂಗೆ ಹೋದೆವು. ಅವರು ಯಾವುದೋ ಪುಸ್‌ತಕ ಓದುತ್‌ತಾ ಇದ್‌ದರು. ನಾವು ಅವರ ಪಕ್‌ಕ ಹೋಗಿ ಕುಳಿತೆವು. ನಮ್‌ಮತ್‌ತ ನೋಡಿದ ಅವರು ತಾವು ಓದುತ್‌ತಿದ್‌ದ ಪುಸ್‌ತಕವನ್‌ನು ಎತ್‌ತಿಟ್‌ಟು, ನಮ್‌ಮನ್‌ನು ಕೇಳಿದರು, ’ಏನ್‌ರೋ? ಏನು ಬೇಕು?’
ಅದಕ್‌ಕೆ ನಮ್‌ಮ ಅಣ್‌ಣ ಕೇಳಿದ ’ಅಜ್‌ಜಿ ನಿಮಗೆ ಆ ಕೃಷ್‌ಣಮ್‌ಮ ಅವರ ಬಗ್‌ಗೆ ಚೆನ್‌ನಾಗಿ ಗೊತ್‌ತಲ್‌ವಾ? ಹೇಳಜ್‌ಜಿ, ಅವರ ಬಗ್‌ಗೆ ನಾವು ತಿಳ್‌ಕೋಬೇಕು.’ ಎಂದ.
ನಮ್‌ಮ ಅಜ್‌ಜಿ ಹೇಳತೊಡಗಿದರು: ’ನಾವು ಈ ಮನೆಗೆ ಬಂದಾಗ ರವಿ ಇನ್‌ನೂ ಹುಟ್‌ಟಿರಲ್‌ಲಿಲ್‌ಲ. ಇಲ್‌ಲಿಗೆ ಬಂದು ಒಂದು ವರ್‌ಷ ಆದ ಮೇಲೆ ರವಿ ಹುಟ್‌ಟಿದ್‌ದು. ಸುಮಾರು ಹದಿನೈದು ವರ್‌ಷ ಆಯಿತು ನಾವು ಇಲ್‌ಲಿಗೆ ಬಂದು. ಕೃಷ್‌ಣಮ್‌ಮ ಅವರು ಅದಕ್‌ಕೂ ಮೊದಲಿನಿಂದಲೇ ಆ ಮನೆಯಲ್‌ಲಿ ಇದ್‌ದರು. ಅವರಿಗೆ ಒಬ್‌ಬಳು ಮಗಳು. ಮದುವೆಯಾಗಿದೆ. ತುಂಬಾ ಒಳ್‌ಳೇ ಅಳಿಯ, ಒಳ್‌ಳೇ ಕೆಲಸ. ಇಬ್‌ಬರೂ ಚೆನ್‌ನಾಗಿದ್‌ದಾರೆ. ಅಮೆರಿಕಾದಲ್‌ಲಿ ಇಲ್‌ಲೋ ಇದ್‌ದಾರೆ ಅಂತ ಕೃಷ್‌ಣಮ್‌ಮ ತಮ್‌ಮ ಅಳಿಯನ ಬಗ್‌ಗೆ ಹೇಳ್‌ತಿದ್‌ರು. ಅವರಿಗೆ ಸಾಯೋವಾಗ ಸುಮಾರು ಎಂಭತ್‌ತು ವರ್‌ಷ ಇರಬಹುದು. ಒಳ್‌ಳೇ ಹೆಂಗಸು. ಏನು ದೈವ ಭಕ್‌ತಿ! ಏನು ಪೂಜೆ, ಪುನಸ್‌ಕಾರ! ದಿನಾ ಸಾಯಂಕಾಲ ರಾಮ ಮಂದಿರಕ್‌ಕೆ ಹೋಗ್‌ತಿದ್‌ರು. ಹರಿಕತೆ ಏನಾದ್‌ರೂ ಇದ್‌ರೆ ತಪ್‌ಪದೇ ಹೋಗ್‌ತಾ ಇದ್‌ದರು. ನಾನು ಕೆಲವು ಸಾರಿ ಅವರ ಜೊತೆ ಹರಿಕತೆ ಕೇಳೋಕೆ ಹೊಗ್‌ತಿದ್‌ದೆ. ನನಗಿನ್‌ನೇನು ಬೇಕು ಪದ್‌ದಕ್‌ಕ, ದೇವರು ನನ್‌ನ ಯಾವಾಗ ಕರೆಸಿಕೊಳ್‌ತಾನೋ, ಏನೋ? ಅಂತ ಹೇಳೋರು. ಅವರಿಗೆ ಯಾವ ಆಶೇನೂ ಇರ್‌ಲ್‌ಲಿಲ್‌ಲ. ನೆಮ್‌ಮದಿಯಿಂದ ಇದ್‌ರು.’
’ಅಜ್‌ಜಿ ಅಂಥವ್‌ರು ದೆವ್‌ವ ಆದ್‌ರು ಅಂತ ಜನ ಹೇಗೆ ಅಂತಾರೆ?’ ಎಂದು ನಾನು ಕೇಳಿದೆ ನಮ್‌ಮ ಅಜ್‌ಜಿಯನ್‌ನು.
’ಅದೇ ಕಣ್‌ರೋ ನನಗೂ ಗೊತ್‌ತಾಗ್‌ದೇ ಇದ್‌ದದ್‌ದು. ಅವರು ತೀರಿಕೊಂಡ ಸುಮಾರು ಎರಡು ವಾರದ ನಂತರ ಯಾರೋ ಒಬ್‌ಬ ರಾತ್‌ರಿ ಹೊತ್‌ತಲ್‌ಲಿ ಆ ಕಡೆಯಿಂದ ಬರ್‌ತಾ ಇದ್‌ದಾಗ, ಮಗು ಒಂದು ಅಳ್‌ತಾ ಇರೋ ಶಬ್‌ದ ಕೇಳ್‌ತಂತೆ. ಅವನು ಪುಕ್‌ಕಲ ಇರಬೇಕು. ಹೆದರಿಕೊಂಡು ಓಡಿ ಬಂದ್‌ನಂತೆ. ಒಬ್‌ಬರಿಂದ ಒಬ್‌ಬರಿಗೆ ಈ ಸುದ್‌ದಿ ಹರಡಿ ಕೃಷ್‌ಣಮ್‌ಮ ದೆವ್‌ವ ಆಗಿದ್‌ದಾಳೆ ಅಂತ ಜನ ಅಂದುಕೊಳ್‌ತಿದ್‌ದಾರೆ.’ ಎಂದರು ನಮ್‌ಮ ಅಜ್‌ಜಿ.
’ದೆವ್‌ವನೂ ಅಲ್‌ಲ ಏನೂ ಅಲ್‌ಲ. ನಿನ್‌ನೆ ನಾವು ನೋಡ್‌ಲಿಲ್‌ವಾ ಬೆಕ್‌ಕಿನ ಮರಿ ಎಳೇ ಮಗೂ ಹಾಗೆ ಅರ್‌ಚ್‌ಕೋತಿತ್‌ತು.’ ಎಂದ ನಮ್‌ಮಣ್‌ಣ.
’ಹೌದು ಕಣ್‌ರೋ, ಕೆಲವು ಸಾರಿ ಬೆಕ್‌ಕು ಹೆದರಿಕೊಂಡು ಅರಚಿಕೊಳ್‌ಳೋವಾಗ ಎಳೇ ಕೂಸು ಅತ್‌ತ ಹಾಗೇ ಕೇಳಿಸುತ್‌ತೆ. ನಾನೂ ನೋಡಿದ್‌ದೀನಿ,’ ಎಂದರು ನಮ್‌ಮ ಅಜ್‌ಜಿ.
ಇದಾದ ಒಂದೆರಡು ತಿಂಗಳ ನಂತರ ನಮ್‌ಮ ತಂದೆಗೆ ಬೆಂಗಳೂರಿಗೆ ವರ್‌ಗವಾಯಿತು. ನಾವೆಲ್‌ಲ ಬೆಂಗಳೂರಿಗೆ ಬಂದೆವು.
ನಾವು ಬೆಂಗಳೂರಿಗೆ ಬಂದು ಹನ್‌ನೆರಡು ವರ್‌ಷಗಳ ನಂತರ, ನಾನು ತುಮಕೂರಿಗೆ ನನ್‌ನ ಸೋದರತ್‌ತೆ ಮನೆಗೆ ಹೋಗಿದ್‌ದೆ. ಅವರ ಮನೆ ನಾವಿದ್‌ದ ಮನೆಯ ಪಕ್‌ಕದ ಮನೆ. ನಾನು ಅಲ್‌ಲಿಗೆ ಹೋದ ಮಾರನೆಯ ದಿನ ಬೆಳಿಗ್‌ಗೆ ಹೊರಗೆ ಬಂದು ನೋಡಿದರೆ ಅಲ್‌ಲಿ ಕೃಷ್‌ಣಮ್‌ಮನವರ ಪಾಳು ಮನೆ ಇಲ್‌ಲ! ಆ ಜಾಗದಲ್‌ಲಿ ಎರಡು ಅಂತಸ್‌ತಿನ ಒಂದು ಭವ್‌ಯವಾದ ಬಂಗಲೆ. ವಾಸ್‌ತುಶಿಲ್‌ಪಿಯೊಬ್‌ಬರಿಂದ ವಿನ್‌ಯಾಸಗೊಂಡಿರಬಹುದು ಎನ್‌ನುವಂತಹ ಸುಂದರ ಬಂಗಲೆ. ಸುಮಾರು ಅರ್‌ಧ ಎಕರೆ ವಿಸ್‌ತಾರದಲ್‌ಲಿ ಮನೆಯ ಸುತ್‌ತಲ್‌ಲ ಜಾಗವನ್‌ನು ಒಳಗೊಂಡಂತೆ ಸುತ್‌ತಲೂ ವಿಷಮಧಾರಿ ಗಿಡದ ಕಾಂಪೌಂಡ್‌. ಕಾಂಪೌಡಿನ ಒಳಗೆ ಹುಲ್‌ಲುಹಾಸು. ಹೂವಿನ ಗಿಡಗಳು. ಕಲ್‌ಲಿನ ಬಿಲ್‌ಲೆಗಳ ಕಾಲುದಾರಿಗಳು. ಮನೆಯ ಮುಂದೆ ಸುಮಾರು ಐವತ್‌ತು ಅಡಿ ದೂರದಲ್‌ಲಿ ಅದೇ ಹುಣಿಸೇಮರ! ಮನೆಯ ಹಿಂದೆ ಹಲಸಿನ ಮರ ಇರುವುದು ಕಾಣುತ್‌ತಿತ್‌ತು. ಅಲ್‌ಲಿದ್‌ದ ಯಾವುದೇ ಮರವನ್‌ನೂ ಕಡಿದಿರಲಿಲ್‌ಲ. ಹುಣಿಸೇ ಮರದ ಕೆಳಗೆ ಎರಡು ಕಲ್‌ಲು ಬೆಂಚು! ನಮ್‌ಮ ಸೋದರತ್‌ತೆಯವರನ್‌ನು ಕೇಳಿದೆ, ’ಏನತ್‌ತೆ? ಕೃಷ್‌ಣಮ್‌ಮನ ದೆವ್‌ವದ ಮನೆ ಜಾಗದಲ್‌ಲಿ ದೊಡ್‌ಡ ಬಂಗಲೆ!’ ’ಹೌದು ರವಿ. ಅವರು ಅಮೇರಿಕಾದಲ್‌ಲಿ ದೊಡ್‌ಡ ಸೈಂಟಿಸ್‌ಟ್‌ ಆಗಿದ್‌ರಂತೆ. ಈಗ ರಿಟೈರ್‌ಡ್‌ ಆಗಿದ್‌ದಾರಂತೆ. ಅವರ ಮನೆ ಅದು.’ ಆ ಮನೆಗೆ ಹೋದೆ ಆ ಸೈಂಟಿಸ್‌ಟ್‌ ಅವರನ್‌ನು ಭೇಟಿ ಮಾಡಿ ಮಾತನಾಡಲು. ಅವರೇ ನಾನು ಏಳನೇ ಕ್‌ಲಾಸ್‌‌ನಲ್‌ಲಿ ಓದುತ್‌ತಿದ್‌ದಾಗ ನಮ್‌ಮ ಸ್‌ಕೂಲ್‌‌ಡೇನಲ್‌ಲಿ ಭಾಷಣ ಮಾಡಿದ್‌ದ ವಿಜ್‌ಞಾನಿಗಳು. ಅವರ ಮನೆಗೆ ನಾನೂ ನನ್‌ನ ಅಣ್‌ಣ ನಮ್‌ಮ ಕನ್‌ನಡ ಮೇಷ್‌ಟ್‌ರ ಜೊತೆ ಹೋಗಿದ್‌ದಿದ್‌ದು. ಅವರಿಗೆ ಮೊದಲು ನಾನು ಯಾರೆಂದು ಗೊತ್‌ತಾಗಲಿಲ್‌ಲ. ಅವರು ಸ್‌ಕೂಲ್‌ ಡೇನಲ್‌ಲಿ ಭಾಷಣ ಮಾಡಿದ್‌ದು, ನಾವು ಅವರ ಮನೆಗೆ ಕನ್‌ನಡ ಮೇಷ್‌ಟ್‌ರ ಜೊತೆ ಹೋಗಿದ್‌ದು ಹೇಳಿದ ಮೇಲೆ ಅವರಿಗೆ ನೆನಪಿಗೆ ಬಂತು. ಅವರಿಗೆ ತುಂಬ ಸಂತೋಷವಾಯಿತು. ನನಗೂ ಸಹ. ’ಸಾರ್‌, ನೀವು ಅಂದು ಮಾಡಿದ ಭಾಷಣ ನನ್‌ನ ಅಲೋಚನೆ ಮಾಡುವ ರೀತಿಯನ್‌ನು ಬದಲಾಯಿಸಿತು. ಯಾವುದನ್‌ನೂ ಕೂಲಂಕಷವಾಗಿ ಪರೀಕ್‌ಷಿಸುವ ಗುಣವನ್‌ನು ರೂಢಿಸಿಕೊಂಡೆ. ನಮ್‌ಮ ಅಣ್‌ಣನೂ ಸಹ ಹೀಗೇ ಆಗಿದ್‌ದಾನೆ’ ಎಂದೆ. ’ಬಾ ಆ ಹುಣಿಸೇಮರದ ಕೆಳಗೆ ಕುಳಿತು ಕಾಫೀ ಕುಡಿಯೋಣ’, ಎಂದರು. ಇಬ್‌ಬರೂ ಅಲ್‌ಲಿ ಕಲ್‌ಲು ಬೆಂಚಿನ ಮೇಲೆ ಕುಳಿತೆವು. ಅವರ ಮಗಳು ನಮಗೆ ಕಾಫಿ ತಂದು ಕೊಟ್‌ಟರು. ನಾವು ಕಾಫಿ ಕುಡಿಯುತ್‌ತಿದ್‌ದಾಗ, ಒಂದು ಸಣ್‌ಣ ಮಗು ಅಳುವ ಶಬ್‌ದ! ’ಮಗು ಅಳ್‌ತಿದೆ. ಬರ್‌ತೀನಿ’ ಎಂದು ಅವರ ಮಗಳು ಮನೆಯ ಒಳಗೆ ಹೋದರು. ಅದು ಆ ವಿಜ್‌ಞಾನಿಯವರ ಮೊಮ್‌ಮಗು. ಆ ಮನೆಯಲ್‌ಲಿ ವಯಸ್‌ಸಾದ ವಿಜ್‌ಞಾನಿಯವರಿಂದ ಹಿಡಿದು ಆ ಪುಟ್‌ಟ ಮೊಮ್‌ಮಗು ವರೆಗೆ ಎಲ್‌ಲರೂ ನಿರಾಂತಕವಾಗಿ ಸಂತೋಷದಿಂದಿದ್‌ದಾರೆ.

No comments:

Post a Comment