ಸುಮಾರು ವರ್‌ಷಗಳ ಹಿಂದಿನ ಘಟನೆ. ನಾನು ಕೆಲಸದ ನಿಮಿತ್‌ತ ಆಗಾಗ ಬೆಂಗಳೂರಿನಿಂದ ತುಮಕೂರಿಗೆ ಹೋಗಿ ಬರುತ್‌ತಿದ್‌ದೆ. ಅಂಥದೊಂದು ದಿನ. ಬೆಳಿಗ್‌ಗೆ ಸುಮಾರು ಹನ್‌ನೊಂದು ಗಂಟೆ ಸಮಯ. ಬೆಂಗಳೂರಿನಿಂದ ತುಮಕೂರಿಗೆ ಸರ್‌ಕಾರಿ ಬಸ್‌ಸಿನಲ್‌ಲಿ ಹೊರಟಿದ್‌ದೆ. ಬೆಂಗಳೂರು ತುಮಕೂರು ಮಧ್‌ಯೆ ಹೆದ್‌ದಾರಿಯ ಕೆಲಸ ನಡೆಯುತ್‌ತಿತ್‌ತು. ನೆಲಮಂಗಲದ ವರೆಗೆ ಕೆಲಸ ಆಗಿತ್‌ತು. ನೆಲಮಂಗಲದಿಂದ ಮುಂದಕ್‌ಕೆ ರಸ್‌ತೆ ಮಧ್‌ಯೆ ಮೀಡಿಯನ್ ಇರಲ್‌ಲಿಲ್‌ಲ. ಹಳದಿ ಬಣ್‌ಣದ ಪಟ್‌ಟಿ ಇತ್‌ತು. ಬಸ್‌ಸು ದಾಬಸ್‌ಪೇಟೆ ದಾಟಿ ನಿಜಗಲ್ ಕಡೆ ಹೋಗುತ್‌ತಿತ್‌ತು. ರಸ್‌ತೆಯಲ್‌ಲಿ ಅಂಥಹ ಟ್‌ರಾಫಿಕ್ ಇರಲ್‌ಲಿಲ್‌ಲ. ಬಸ್ ವೇಗವಾಗಿ ಹೋಗುತ್‌ತಿತ್‌ತು. ಬಿಸಿಲಿನ ಝಳದಿಂದಾಗಿ ಸೆಖೆಯಿದ್‌ದು, ಬಸ್‌ಸಿನಲ್‌ಲಿ ಮೌನ ಆವರಿಸಿತ್‌ತು. ಡ್‌ರೈವರ್ ಹಿಂದಿನ ಸಾಲಿನಲ್‌ಲಿ ಕಿಟಕಿಯ ಪಕ್‌ಕ ಕುಳಿತಿದ್‌ದೆ. ಬಸ್‌ಸು ಹೋಗುತ್‌ತಿದ್‌ದ ರಸ್‌ತೆಯನ್‌ನೇ ನೋಡುತ್‌ತಾ ಇದ್‌ದೆ. ಆವಾಗೀವಾಗ ಒಂದು ಬಸ್‌ಸು, ಒಂದು ಕಾರು ಎದುರಿನಿಂದ ಹಾದು ಹೋಗುತ್‌ತಿದ್‌ದವು. ಬಿಸಿ ಗಾಳಿ ಬೀಸುತಿತ್‌ತು. ಕೆಲವರು ನಿದ್‌ದೆಗೆ ಶರಣಾಗಿದ್‌ದರು.
ರಸ್‌ತೆಯ ಎಡಗಡೆ ಭಾಗದ ಗದ್‌ದೆಯಲ್‌ಲಿ ಭತ್‌ತದ ಬೆಳೆ ಚೆನ್‌ನಾಗಿತ್‌ತು. ರಸ್‌ತೆಯ ಬದಿಯ ಅಡಿಕೆಯ ತೋಟಗಳು ದೂರದಲ್‌ಲಿ ಕಾಣುತಿದ್‌ದವು. ನಾನು ಹೋಗುತ್‌ತಿದ್‌ದ ಬಸ್‌ಸಿನಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್‌ಲಿ, ರಸ್‌ತೆಗೆ ಇನ್‌ನೂರು ಅಡಿ ಒಳಕ್‌ಕೆ ಒಂದು ನೀರಾವರಿ ಭಾವಿ ಕಾಣುತ್‌ತಿತ್‌ತು. ಸಮೀಪದಲ್‌ಲಿ ಒಂದು ಆಲದ ಮರವಿತ್‌ತು. ಅಲ್‌ಲಿ ಒಂದು ಸಣ್‌ಣ ಪಂಪ್‌ಹೌಸ್ ಕಾಣಿಸುತ್‌ತಿತ್‌ತು. ಪಂಪ್ ಆನ್ ಆಗಿತ್‌ತು. ಸುಮಾರು ಎರಡು ಅಂಗುಲ ಗಾತ್‌ರದ ಪೈಪಿನಿಂದ ನೀರು ಧಾರಾಳವಾಗಿ ಬರುತ್‌ತಿತ್‌ತು. ರಸ್‌ತೆಯ ಆ ಕಡೆ ಒಂದು ಕಾರು ನಿಂತಿತ್‌ತು. ಕಾರು ಕೆಟ್‌ಟು ನಿಂತಿದ್‌ದಿರಬೇಕು. ಬೆಂಗಳೂರಿನ ಕಡೆ ಹೋಗುತ್‌ತಿದ್‌ದಿರಬೇಕು. ಕಾರಿನ ಬಾನೆಟ್ ಮೇಲೆ ತೆರೆದಿದ್‌ದು ಕಾಣುತಿತ್‌ತು. ಕಾರಿನ ಹಿಂದಿನ ಡಿಕ್‌ಕಿ ಕೂಡ ತೆರೆದಿತ್‌ತು. ವ್‌ಯಕ್‌ತಿಯೊಬ್‌ಬ ಬಗ್‌ಗಿ ಕಾರಿನ ಒಳಗೆ ಏನೋ ನೋಡುತ್‌ತಿದ್‌ದ. ಆ ವ್‌ಯಕ್‌ತಿಯ ಪಕ್‌ಕದಲ್‌ಲಿ ಒಬ್‌ಬ ಹುಡುಗ, ಒಂದು ಹುಡುಗಿ ನಿಂತಿದ್‌ದರು. ಹುಡುಗನಿಗೆ ಬಹುಶಃ ಹೈಸ್‌ಕೂಲ್ ೮ನೇ ಅಥವಾ ೯ ನೇ ಕ್‌ಲಾಸ್ ಓದುತ್‌ತಿರಬಹುದು ಎನ್‌ನುವಂಥಹ ವಯಸ್‌ಸು. ಹುಡುಗಿ ೨ ಅಥವಾ ೩ ವರ್‌ಷ ಚಿಕ್‌ಕವಳಿರಬಹುದು. ಇದನ್‌ನು ನಾನು ಗಮನಿಸುತ್‌ತಿದ್‌ದಂತೆ ನಾನಿದ್‌ದ ಬಸ್‌ಸು ಆ ಕಾರನ್‌ನು ಸಮೀಪಿಸುತ್‌ತಿತ್‌ತು. ಬಸ್‌ಸಿನ ವೇಗ ಸುಮಾರು ಗಂಟೆಗೆ ೬೦ - ೭೦ ಕಿಲೋಮೀಟರ್ ಇದ್‌ದಿರಬಹುದು.
ಆ ವ್‌ಯಕ್‌ತಿ ಹುಡುಗನತ್‌ತ ತಿರುಗಿ ಏನೋ ಹೇಳಿದ. ಆ ಹುಡುಗ ಇದ್‌ದಕ್‌ಕಿದಂತೆ ಕಾರಿನ ಹಿಂದುಗಡೆಗೆ ಹೋದ. ಒಂದರ್‌ಧ ನಿಮಿಷದಲ್‌ಲಿ ಸರ್‌ರನೆ ರಸ್‌ತೆಯನ್‌ನು ದಾಟಲು ಓಡುತ್‌ತಿದ್‌ದ. ಅವನ ಕೈಯಲ್‌ಲಿ ಒಂದು ಕ್‌ಯಾನ್ ಇತ್‌ತು. ಬಹುಶ ರಸ್‌ತೆಯ ಆ ಕಡೆ ಇದ್‌ದ ಪಂಪ್‌ಹೌಸ್‌ನಿಂದ ನೀರು ತರಲು ಓಡುತ್‌ತಿದ್‌ದಿರಬೇಕು. ಆ ಹುಡುಗ ರಸ್‌ತೆಯ ಅರ್‌ಧಕ್‌ಕೆ ಬರುವಷ್‌ಟರಲ್‌ಲಿ ನಾವು ಹೋಗುತ್‌ತಿದ್‌ದ ಬಸ್ ಅವನಿಗೆ ತೀರಾ ಸಮೀಪಕ್‌ಕೆ ಬಂದಿತ್‌ತು. ನೋಡನೋಡುತ್‌ತಿದಂತೆಯೇ ಅನಾಹುತ ಆಗಿಯೇ ಹೋಯಿತು. ಬಸ್‌ಸು ಆ ಹುಡುಗನಿಗೆ ಜೋರಾಗಿ ಡಿಕ್‌ಕಿ ಹೊಡೆಯಿತು. ಹುಡುಗನ ದೇಹ ಜೋರಾಗಿ ಒದ್‌ದ ಕಾಲ್‌ಚೆಂಡಿನಂತೆ ವೇಗವಾಗಿ ಉರುಳುತ್‌ತಾ ಸುಮಾರು ನೂರು ಅಡಿ ಮುಂದಿದ್‌ದ ರಸ್‌ತೆ ಬದಿಯ ಮರಕ್‌ಕೆ ಅಪ್‌ಪಳಿಸಿ ಮೇಲಕ್‌ಕೆ ಚಿಮ್‌ಮಿ ದೊಪ್‌ಪನೆ ಕಳಕ್‌ಕೆ ಬಿದ್‌ದಿತು. ಆ ದೇಹ ಉರುಳಿದ ಜಾಗದ ಉದ್‌ದಕ್‌ಕೂ ರಕ್‌ತದ ಗೆರೆಗಳು. ದೇಹ ಮಾಂಸದ ಮುದ್‌ದೆಯಂತೆ ರಕ್‌ತಸಿಕ್‌ತವಾಯಿತು. ಕುಲುಮೆಯ ತಿದಿಯಂತೆ ಜೋರಾಗಿ ಏದುಸಿರು ಬರುತ್‌ತಿತ್‌ತು. ಸ್‌ವಲ್‌ಪ ದೂರದಲ್‌ಲಿ ಬಸ್‌ಸನ್‌ನು ನಿಲ್‌ಲಿಸಿದ ಡ್‌ರೈವರ್ ಕೆಳಗಿಳಿದು ಬಂದ. ಬಸ್‌ಸಿನಲ್‌ಲಿದ್‌ದವರೆಲ್‌ಲಾ ಕೆಳಗೆ ಇಳಿದೆವು. ಛಿದ್‌ರಛಿದ್‌ರವೂ, ರಕ್‌ತಸಿಕ್‌ತವೂ ಆದ ದೇಹದ ಕೊನೆಯ ಗಳಿಗೆಯ ನರಳಾಟ ನೋಡಲು ಭೀಕರವಾಗಿತ್‌ತು. ಬಸ್‌ಸಿನ ಪ್‌ರಯಾಣಿಕರು ಆ ದೇಹದ ಸ್‌ಥಿತಿಯನ್‌ನು ನೋಡಲಾರದಾದರು. ಕೆಲವರು ಒಂದೆರಡು ಕ್‌ಷಣ ನೋಡಿ ಸಹಿಸಲಾಗದೆ ದೂರ ಹೋಗಿ ನಿಂತರು. ಕಾರಿನ ವ್‌ಯಕ್‌ತಿ ಮತ್‌ತು ಅವನ ಜೊತೆಯಲ್‌ಲಿದ್‌ದ ಹುಡುಗಿ ಓಡಿ ಬಂದರು. ಆ ಹುಡುಗಿ ಜೋರಾಗಿ ಅಳುತ್‌ತಾ ಆತನ ಪ್‌ಯಾಂಟ್ ಹಿಡಿದುಕೊಂಡಿದ್‌ದಳು. ಆ ವ್‌ಯಕ್‌ತಿಗೆ ಕೈ ನಡುಗುತ್‌ತಿತ್‌ತು. ಕಣ್‌ಣಲ್‌ಲಿ ನೀರು ಉಕ್‌ಕಿ ಕೆಳಗೆ ಸುರಿಯುತ್‌ತಿತ್‌ತು. ಕಾಲು ಕಂಪಿಸುತ್‌ತಿತ್‌ತು.
ಪ್‌ರಯಾಣಿಕರಲ್‌ಲಿ ಇಬ್‌ಬರು ಮಾತನಾಡಿಕೊಳ್‌ಳುತ್‌ತಿದ್‌ದರು, "ಅರೆ, ಇವರು ನಮ್‌ಮ ಕಾಲೇಜಿನ ಅಸಿಸ್‌ಟೆಂಟ್ ಪ್‌ರೊಫೆಸರ್ ನರಸಿಂಹ ಮೂರ್‌ತಿ." ಅವರಾಡುತ್‌ತಿದ್‌ದ ಮಾತುಗಳನ್‌ನು ಕೇಳಿಸಿಕೊಂಡವರು "ಹೌದಾ. ಆ ಹುಡುಗರು ಅವರ ಮಕ್‌ಕಳಿರಬಹುದು ಅಲ್‌ವಾ?" ಎಂದು ಕೇಳಿದರು. ಅದಕ್‌ಕವರು "ಹೌದು, ನಾವಿಬ್‌ಬರೂ ಅದೇ ಕಾಲೇಜಿನಲ್‌ಲಿ ಕೆಲಸ ಮಾಡ್‌ತಿರೋದು. ಈ ಹುಡುಗ ಅವರ ಮಗ ಪ್‌ರಶಾಂತ. ಹೈಸ್‌ಕೂಲ್ ೯ನೇ ಕ್‌ಲಾಸ್. ಆ ಹುಡುಗಿ ಅವನ ತಂಗಿ ಸೌಮ್‌ಯ. ೬ನೇ ಕ್‌ಲಾಸ್. ಎಂಥಾ ಕೆಲಸಾ ಆಗಿ ಹೋಯ್‌ತು. ಸುಖವಾದ ಸಂಸಾರ. ಗಂಡ ಹೆಂಡತಿ; ಇಬ್‌ಬರೇ ಮಕ್‌ಕಳು. ಮೊನ್‌ನೇ ತಾನೇ ಅಸಿಸ್‌ಟೆಂಟ್ ಪ್‌ರೊಫೆಸರ್ ಅವರ ಹೆಂಡತಿಯನ್‌ನು ಊರಿಗೆ ಕಳಿಸ್ ಕೊಟ್‌ಟಿದ್‌ರು. ಆಯಮ್‌ಮನ ದೊಡ್‌ಡಕ್‌ಕನ ಮಗಳ ಮದುವೆ ಅಂತ ಹೇಳ್‌ತಿದ್‌ರು. ಪರೀಕ್‌ಷೆ ಮುಗಿಸ್‌ಕೊಡು ಇವತ್‌ತು ಅಸಿಸ್‌ಟೆಂಟ್ ಪ್‌ರೊಫೆಸರ್ ಮತ್‌ತು ಮಕ್‌ಕಳು ಊರಿಗೆ ಹೊರಟಿದ್‌ರೂಂತ ಕಾಣುತ್‌ತೆ; ಮದುವೆ ಸಂಭ್‌ರಮದಲ್‌ಲಿ ಖುಷಿಯಾಗಿ ಇರೋದಕ್‌ಕೆ ಹೊರಟವರಿಗೆ ಹೀಗಾಗಿ ಹೋಯಿತು", ಎಂದು ಹೇಳಿದರು. ಅವರಿಬ್‌ಬರೂ ಅಸಿಸ್‌ಟೆಂಟ್ ಪ್‌ರೊಫೆಸರ್ ನರಸಿಂಹ ಮೂರ್‌ತಿಯವರ ಹತ್‌ತಿರ ಬಂದು "ಎಂಥಾ ಕೆಲಸ ಆಗಿ ಹೋಯ್‌ತಲ್‌ಲಾ ಸಾರ್", ಎಂದು ಹೇಳಿದರು. ಸ್‌ವಲ್‌ಪ ದೂರದಲ್‌ಲಿ ತಲೆ ತಗ್‌ಗಿಸಿ ನಿಂತುಕೊಂಡರು.
ಪ್‌ರಯಾಣಿಕರಲ್‌ಲಿ ಸ್‌ವಲ್‌ಪ ವಯಸ್‌ಸಾದರೊಬ್‌ಬರು ನರಸಿಂಹ ಮೂರ್‌ತಿಯವರ ಬಳಿ ಸಾಗಿ "ಏನೋ ಆಗಬಾರದ್‌ದು ಆಗಿ ಹೋಯಿತು. ಎಲ್‌ಲಾ ದೈವೇಚ್‌ಛೆ. ಕೊನೆ ಸಮೀಪಿಸುತ್‌ತಿದೆ. ಬಾಯಿಗೆ ಗಂಗಾಜಲ ಬಿಡಿ. ಮಗೂ ಆತ್‌ಮಕ್‌ಕೆ ಶಾಂತಿ ಸಿಕ್‌ಕಲಿ." ಎನ್‌ನುತ್‌ತಾ ಅವರ ಬೆನ್‌ನು ಸವರಿದರು. ನರಸಿಂಹ ಮೂರ್‌ತಿಯವರು ಏನೂ ಹೇಳಲಾಗದ, ಏನೂ ಮಾಡಲಾಗದ ಸ್‌ಥಿತಿಯಲ್‌ಲಿದ್‌ದರು. "ಕಾರಿನಲ್‌ಲಿ ರೈಲ್‌ಚಂಬಿದೆ. ತನ್‌ನಿ", ಎಂದು ಅವರ ಕಾಲೇಜಿನಲ್‌ಲಿ ಕೆಲಸ ಮಾಡುತ್‌ತಿದವರಿಗೆ ಹೇಳಿದರು. ಅವರಲ್‌ಲೊಬ್‌ಬ ರೈಲ್‌ಚಂಬನ್‌ನು ತಂದು ನರಸಿಂಹ ಮೂರ್‌ತಿಯವರ ಕೈಗೆ ಕೊಟ್‌ಟ. ಒಂದಿಬ್‌ಬರು ಸೇರಿ ನುಜ್‌ಜುಗುಜ್‌ಜಗಿದ್‌ದ ಆ ದೇಹವನ್‌ನು ಮರಕ್‌ಕೆ ಆನಿಸಿ ಒರಗಿಸಿದರು. ಕತ್‌ತು ಪಕ್‌ಕಕ್‌ಕೆ ವಾಲಿತ್‌ತು. ಕುಲುಮೆಯ ತಿದಿಯಂತೆ ಏದುಸಿರು ಜೋರಾಗಿತ್‌ತು. ನರಸಿಂಹ ಮೂರ್‌ತಿಯವರು "ಕೃಷ್‌ಣ ಕೃಷ್‌ಣ" ಎನ್‌ನುತ್‌ತಾ ರೈಲುಚಂಬಿನಿಂದ ನೀರನ್‌ನು ತಮ್‌ಮ ಮಗನ ಬಾಯಿಗೆ ಸುರಿಯತೊಡಗಿದರು. ನೀರು ಬಾಯಿಂದ ಒಳಗೆ ಇಳಿಯುತ್‌ತಿಲ್‌ಲ. ಪಕ್‌ಕಕ್‌ಕೆ ವಾಲಿದ್‌ದ ಬಾಯಿಯಿಂದ ಕೆಳಕ್‌ಕೆ ನೆಲಕ್‌ಕೆ ಬೀಳುತ್‌ತಿತ್‌ತು. ಏದುಸಿರು ನಿಂತಿತು. ಪ್‌ರಾಣ ಹೋಯಿತು ಎಂದು ಎಲ್‌ಲರೂ ಅಂದುಕೊಂಡರು.
ಆ ಬಸ್‌ಸಿನಲ್‌ಲಿ ಬಂದಿದ್‌ದ ಪ್‌ರಯಾಣಿಕರು ಬೇರೆ ಬಸ್‌ಸು ಲಾರಿಗಳನ್‌ನು ಅರಸುತ್‌ತಿದ್‌ದರು. ನಾನು ಇನ್‌ನೊಂದು ಸರ್‌ಕಾರಿ ಬಸ್‌ಸಿನಲ್‌ಲಿ ಪ್‌ರಯಾಣ ಮುಂದುವರಿಸಿದೆ. ಹಾಗೇ ಯೊಚಿಸುತ್‌ತಿದ್‌ದೆ. ಅಸಿಸ್‌ಟೆಂಟ್ ಪ್‌ರೊಫೆಸರ್ ನರಸಿಂಹ ಮೂರ್‌ತಿಯವರು ತಮ್‌ಮ ಮಕ್‌ಕಳಿಗೆ ರಸ್‌ತೆ ಸುರಕ್‌ಷತೆ ಬಗ್‌ಗೆ ಚೆನ್‌ನಾಗಿ ತಿಳಿಸಿ ಅಭ್‌ಯಾಸ ಮಾಡಿಸಿದ್‌ದಿದ್‌ದರೆ ಎಷ್‌ಟು ಚೆನ್‌ನಾಗಿತ್‌ತು. ರಸ್‌ತೆ ದಾಟುವ ಮುನ್‌ನ ಆ ಹುಡುಗ ಪ್‌ರಶಾಂತ ಒಂದು ಕ್‌ಷಣ ರಸ್‌ತೆಯ ಎರಡೂ ಕಡೆ ನೋಡಿದ್‌ದಿದ್‌ದರೆ, ಆಕ್‌ಸಿಡೆಂಟ್ ಆಗುತ್‌ತಲೇ ಇರಲಿಲ್‌ಲ. ಕೇವಲ ಒಂದು ಕ್‌ಷಣದ ಆತುರದಿಂದ ತನ್‌ನ ಜೀವವನ್‌ನೇ ತೆತ್‌ತನಲ್‌ಲಾ ಆ ಚಿಕ್‌ಕ ಹುಡುಗ.
ತಲೆ ದಿಂ ಎನ್‌ನುತ್‌ತಿತ್‌ತು. ಮನಸ್‌ಸು ಭಾರವಾಗಿತ್‌ತು.

No comments:
Post a Comment