ಉದಯರವಿ ಶಾಸ್ತ್ರಿಯವರು ನನ್ನ ಲೇಖನ ’ಅಳಿಸಲಾಗದ ಲಿಪಿ ನಮಗೇಕೆ ಬೇಕು?’ ನಲ್ಲಿ ಕೊಟ್ಟಿರುವ ಒಂದು ಅಂಶವನ್ನು ಪ್ರಶ್ನಿಸಿದ್ದಾರೆ - ಕನ್ನಡದಲ್ಲಿ ಬರೆಯಲು ಸಾಧ್ಯವಾಗಬಹುದಾದ ಮೂರು ವ್ಯಂಜನಗಳವರೆಗಿನ ಉಲಿಕಂತೆಗಳ ಗರಿಷ್ಠ ಸಂಖ್ಯೆ ೭೧,೭೩೪. ಬೇರೆಯವರೂ ಈ ಬಗ್ಗೆ ಕೇಳಿದ್ದಾರೆ. ಗಣಿತಕ್ಕೂ ಭಾಷೆಗೂ ಏನು ಸಂಬಂಧ? ಚೂಡಾಮಣಿ ನುಗ್ಗೇಹಳ್ಳೀಯವರೂ ಈ ಬಗ್ಗೆ ಪ್ರಶ್ನಿಸಿದ್ದಾರೆ. ನನ್ನ ಮೂಲ ಲೇಖನದಲ್ಲಿ ಕನ್ನಡದಲ್ಲಿ ಓ.ಸಿ.ಆರ್. ತಂತ್ರಾಂಶಗಳ ( Optical Character Reader, ಮುದ್ರಿಸಿದ ಮತ್ತು ಕೈಬರಹದ ಬರವಣಿಗೆಯನ್ನು ಓದಬಲ್ಲ ಕಂಪೂಟರ್ ತಂತ್ರಾಂಶಗಳು) ಕ್ಲಿಷ್ಟತೆ ಮತ್ತು ನಿಖರತೆಯ ಬಗ್ಗೆ ಚರ್ಚೆ ಮಾಡಿಕೊಳ್ಳಲು ಬಳಸಿದ್ದೇನೆ. ಬೆಂಗಳೂರಿನ ಟಾಟಾ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆದಿರುವ ಸಂಶೋಧನೆ ಬಗ್ಗೆ ಉಲ್ಲೇಖಿಸಿದ್ದೇನೆ.
ಕಂಪೂಟರ್ ಮತ್ತು ಮೆದುಳು ಇವುಗಳಲ್ಲಿ ಕ್ರಿಯಾಸಾಮ್ಯವಿದೆ. ಕಂಪೂಟರ್‌ನ ಅಂತರ್ರಚನೆಗಿಂತಲೂ ಮೆದುಳಿನ ಅಂತರ್ರಚನೆಯು ಬಹಳ ಸಂಕೀರ್ಣವಾಗಿದೆ. ವಿಜ್ಞಾನದಲ್ಲಿ ಪ್ರಕೃತಿಯನ್ನು ಅನುಕರಿಸುವುದು ಸಹಜವಾಗಿಯೇ ನಡೆದು ಬಂದಿದೆ. ಕಂಪೂಟರ್‌ನ ಕೆಲಸದ ವೈಖರಿ ನಮ್ಮ ಮೆದುಳಿನದರಂತೆ. ನಮ್ಮ ಮೆದುಳು ಸಹ ಕಂಪೂಟರಿನಂತೆ ಮತ್ತೆ ಮತ್ತೆ ಬಳಸುವ ಕೆಲಸವನ್ನು ಒಂದು ಉಪಕ್ರಮವಿಧಿಯಂತೆ (subroutine or macros ಎನ್ನಬಹುದು) ತನ್ನಲ್ಲಿ ಶೇಖರಿಸಿಕೊಳ್ಳುತ್ತದೆ. ಇದರ ಪರಿವೆಯೇ ನಮಗೆ ಇರುವುದಿಲ್ಲ. ಉದಾಹರಣೆಗೆ ನಾವು ದಿನಾ ಹೋಗುವ ದಾರಿಯನ್ನು ಕ್ರಮಿಸುವಾಗ ನಮಗರಿಯದಂತೆ ನಮ್ಮ ಮನಸ್ಸು ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ನಾವು ಏನೇ ಯೋಚನೆಯಲ್ಲಿರಲಿ ನಮ್ಮ ನಿತ್ಯದ ಹಾದಿಯಲ್ಲಿ ನಾವು ಸಾಗುತ್ತಿರುತ್ತೇವೆ. ಕೆಲವೊಮ್ಮೆ ಮಾರ್ಗ ಮಧ್ಯದಲ್ಲಿ ದಾರಿ ಬದಲಿಸಬೇಕೆಂದಿದ್ದರೆ ನಮ್ಮ ಜಾಗೃತ ಮನಸ್ಸು ನಮ್ಮನ್ನು ಸಮಯಕ್ಕೆ ಸರಿಯಾಗಿ ಎಚ್ಚರಿಸದಿದ್ದರೆ ನಾವು ನಮ್ಮ ಮಾಮೂಲಿನ ಹಾದಿಯಲ್ಲೇ ಕ್ರಮಿಸುತ್ತಿರುತ್ತೇವೆ. ಇದೇ ರೀತಿ ದಿನ ನಿತ್ಯದ ಬಹಳಷ್ಟು ಕೆಲಸಗಳು ನಮ್ಮ ಅರಿವಿಗೇ ಬಾರದೇ ಉಪಕ್ರಮವಿಧಿಗಳಾಗಿ ನಮ್ಮ ಮೆದುಳಿನಲ್ಲಿ ಶೇಖರವಾಗಿರುತ್ತವೆ ಮತ್ತು ತಮ್ಮ ಪಾಡಿಗೆ ತಾವು ಕೆಲಸ ಮಾಡಿತ್ತಿರುತ್ತವೆ. ಆದ್ದರಿಂದಲೇ ನಾವು ನಮ್ಮ ದಿನ ನಿತ್ಯದ ಕೆಲಸಗಳನ್ನು ಸುಲಲಿತವಾಗಿ ಮಾಡಲು ಸಾಧ್ಯ.
ಕಂಪ್ಯೂಟರ್ ಸಂಯುಕ್ತಾಕ್ಷರಗಳನ್ನು ಓದುವ ಕ್ರಿಯೆಯನ್ನು ಸ್ವಲ್ಪ ವಿವರವಾಗಿ ನೋಡೋಣ. ಸಂಯುಕ್ತಾಕ್ಷರದ ಚಾಕ್ಷುಷರೂಪದ ಮೊದಲ ಭಾಗವನ್ನು ಓದಿ ಅದು ಸ್ವರವೇ ಅಥವಾ ಅಲ್ಲವೇ ಎಂದು ಪರೀಕ್ಷಿಸುತ್ತದೆ. ಸ್ವರವಲ್ಲವಾದಾಗ ಆ ಸಂಯುಕ್ತಾಕ್ಷರದ ಮೊದಲ ವ್ಯಂಜನ ಯಾವುದು, ಅದಕ್ಕೆ ಬೆರೆಸಿರುವ ಸ್ವರ ಯಾವುದು ಎಂದು ನೋಡುತ್ತದೆ. ಸಂಯುಕ್ತಾಕ್ಷರದ ಸ್ವರವನ್ನು ತನ್ನ ಸನಿಹದ ನೆನೆಕೋಶದಲ್ಲಿ ಇರಿಸುತ್ತದೆ. ನಂತರದ ವ್ಯಂಜನಗಳಾವುವು ಎಂದು ಕಂಡು ಹಿಡಿಯುತ್ತಾ ಹೋಗುತ್ತದೆ. ಕೊನೆಯಲ್ಲಿ ಆ ನೆನೆಕೋಶದಿಂದ ಆ ಸ್ವರವನ್ನು ತೆಗೆದು ಕೊನೆಯ ವ್ಯಂಜನಕ್ಕೆ ಸೇರಿಸಿ ಉಚಾರಣೆಯ ಕ್ರಮದಲ್ಲಿ ಸಂಯುಕ್ತಾಕ್ಷರದ ಎಲ್ಲ ಧ್ವನಿಮಾಗಳನ್ನು ಜೋಡಿಸುತ್ತದೆ. ಈ ಕೆಲಸಕ್ಕೆ ಇದಕ್ಕೆಂದೇ ಮೀಸಲಿರುವ ತನ್ನ ದತ್ತಕೋಶದ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಸಾಧ್ಯತೆಗಳು ಹೆಚ್ಚಿದಷ್ಟೂ ಈ ಕ್ರಮವಿಧಿಯ ಕ್ಲಿಷ್ಟತೆ ಮತ್ತು ಸಂಕೀರ್ಣತೆ ಹೆಚ್ಚುತ್ತಿರುತ್ತದೆ. ಅದಕ್ಕೆಂದೇ ಕನ್ನಡದಲ್ಲಿ ಬರೆಯಲು ಸಾಧ್ಯವಾಗಬಹುದಾದ ಮೂರು ವ್ಯಂಜನಗಳವರೆಗಿನ ಉಲಿಕಂತೆಗಳ ಗರಿಷ್ಠ ಸಂಖ್ಯೆ ೭೧,೭೩೪ ಎಂದು ಉಲ್ಲೇಖಿಸಿದ್ದು. ಈ ಕೆಲಸವನ್ನು ನಮ್ಮ ಮೆದುಳು ನಮ್ಮ ಜಾಗೃತ ಮನಸ್ಸಿಗೆ ಅರಿವಿಲ್ಲದಂತೆ ನಿರ್ವಹಿಸುತ್ತಿರುತ್ತದೆ. ಒಂದು ಭಾಷೆಯು ಮತ್ತು ಅದರ ಲಿಪಿಯು ಸಂಕೀರ್ಣವಾದಷ್ಟೂ ಮೆದುಳಿನ ಮೇಲಿನ ಒತ್ತಡ ಹೆಚ್ಚುವುದು ಸಹಜ. ನಮ್ಮ ಮೆದುಳು ಬಹಳ ಸಂಕೀರ್ಣವಾದ ವ್ಯವಸ್ಥೆ. ಕಲಿಯುವಾಗಿನ ಕಷ್ಟ ಕಲಿತಾದ ಮೇಲೆ ಗೊತ್ತಾಗುವುದಿಲ್ಲ. ಸಹಜವೋ ಎಂಬತೆ ಈ ಕೆಲಸ ನಡೆಯುತ್ತಿರುತ್ತದೆ. ಆದರೂ ಸರಳವಾದ ಭಾಷೆಯನ್ನು ಮತ್ತು ಲಿಪಿಯನ್ನು ಓದುವುದಕ್ಕಿಂತಲೂ, ಕ್ಲಿಷ್ಟವಾದ ಭಾಷೆಯನ್ನು ಮತ್ತು ಲಿಪಿಯನ್ನು ಓದುವಾಗ ಮೆದುಳಿಗೆ ಶ್ರಮ ಹೆಚ್ಚು. ಮೆದುಳಿಗೆ ಶ್ರಮ ಹೆಚ್ಚು ಎಂದರೆ ಮೆದುಳು ಹೆಚ್ಚು ಕೆಲಸವನ್ನು ಮಾಡುತ್ತಿದೆ ಎನ್ನಬಹುದು.

ಉತ್ತಮ ಲೇಖನ ಸರ್.. ಅತ್ಯುತ್ತಮ ಮಾಹಿತಿ ಸಂಗ್ರಹಣೆ ಮತ್ತು ವಿವರಣೆಯ ಆಳವಾದ ಅಧ್ಯಯನ ನಿಮ್ಮ ಲೇಖನವನ್ನು ಮನಮುಟ್ಟುವಂತೆ ಮಾಡಿದೆ.. ಕನ್ನಡ ಲಿಪಿ ಮತ್ತು ವ್ಯಾಕರಣವನ್ನು ನಿಮ್ಮದೇ ಒಂದು ವಿಶೇಷ ಶೈಲಿಯಲ್ಲಿ ನಮ್ಮ ಮುಂದೆ ಪರಿಚಯಿಸುತ್ತಿರಿ.. ಏನೋ ಒಂದು ಹೊಸ ವಿಚಾರ ತಿಳಿದ ಸಂತಸ ನಮ್ಮ ಮನಸ್ಸಿನಲ್ಲಿ... ಆದರೆ ಅದನ್ನು ಪ್ರತಿಕ್ರಿಯೆ ರೂಪದಲ್ಲಿ ಯಾವ ರೀತಿ ಹೇಳಬೇಕು ಎಂಬ ಗೊಂದಲದಲ್ಲಿ ಭಾವನೆಗಳು ಅಲೆದಾಡುತ್ತವೆ.. ಹಾಗೆಯೇ ನಿಮ್ಮ ಲೇಖನದ ವಿಷಯವನ್ನು ನಮ್ಮ ಅಪ್ಪ ಅಮ್ಮ ಜೊತೆ ವಿಚಾರ ಮಾಡಿ.. ಅವರ ಪ್ರತಿಕ್ರಿಯೆ ತಿಳಿದು ನಂತರ ಇಲ್ಲಿ ನಿಮಗೆ ಪ್ರತಿಕ್ರಿಯೆ ಹಾಕುವಷ್ಟರಲ್ಲಿ ತಡವಾಗಿರುತ್ತದೆ.. ನಿಮ್ಮ ಈ ಕನ್ನಡ ವ್ಯಾಕರಣದ ವಿಶಿಷ್ಟತೆಯನ್ನು ನಮ್ಮ ಮನೆಯಲ್ಲಿ ಮತ್ತು ನಮ್ಮ ಅಕ್ಕ ಪಕ್ಕದ ಎಲ್ಲರೂ ಆಸಕ್ತಿಯಿಂದ ಕೇಳುತ್ತಾರೆ.. ಮತ್ತು ವಿಚಾರ , ಚರ್ಚೆ ಮಾಡುತ್ತಾರೆ.. ಬಹಳಾ ಉತ್ತಮವಾದ ಹೊಸತನದ ಪರಿಚಯ ಸಿಕ್ಕಂತೆ ಎಲ್ಲರೂ ಒಂದಿಷ್ಟು ಮಾತುಗಳನ್ನು ಹೇಳುತ್ತಾರೆ... ನಿಮಗೆ ನಮ್ಮೆಲ್ಲರ ಪರವಾಗಿ ವಂದನೆಗಳು.. :)
ReplyDelete